ಗಣಪತಿ ಬಪ್ಪಾ ಮೋರೆಯಾ- 66 ಕೆ.ಜಿ. ಚಿನ್ನ, 295 ಕೆಜಿ ಬೆಳ್ಳಿಯಿಂದ ಅಲಂಕೃತಗೊಂಡ ಗಣಪತಿ ಮೂರ್ತಿ – ಮುಂಬೈ ಕಿಂಗ್ಸ್ ಸರ್ಕಲ್‌ ನ‌ ದೇಶದ ಶ್ರೀಮಂತ ಗಣಪತಿ

ಮಂಗಳೂರು(ಮುಂಬೈ): ಗಣೇಶ ಚತುರ್ಥಿ ಮಹಾರಾಷ್ಟ್ರದ ಜನಪ್ರಿಯ ಹಬ್ಬಗಳಲ್ಲಿ ಒಂದು. ಗಣೇಶ ಹಬ್ಬ ಬಂತೆಂದರೆ ಸಾಕು ವಿಶೇಷವಾಗಿ ಮುಂಬೈ ಮಹಾನಗರ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತದೆ.

ದೇಶದ ಅತ್ಯಂತ ಶ್ರೀಮಂತ ಗಣಪತಿಯ ಮೂರ್ತಿ ಎನಿಸಿಕೊಂಡಿರುವ ಮುಂಬೈಯ ಜಿಎಸ್‍ಬಿ ಸೇವಾ ಮಂಡಲದಿಂದ ಆರಾಧನೆಗೊಳ್ಳುವ ಗಣೇಶ ಮೂರ್ತಿಯನ್ನು ಈ ಬಾರಿ 66.5 ಕೆ.ಜಿ ಚಿನ್ನ ಮತ್ತು 295 ಕೆ.ಜಿ. ಬೆಳ್ಳಿಯ ಆಭರಣಗಳಿಂದ ಅಲಂಕರಿಸಲಾಗಿದೆ. ಜಿಎಸ್‍ಬಿ ಸೇವಾ ಮಂಡಲದ ವತಿಯಿಂದ ಕಳೆದ 69 ವರ್ಷಗಳಿಂದ ಪೂರ್ವ ಮುಂಬೈನ ಕಿಂಗ್ಸ್ ಸರ್ಕಲ್‍ನಲ್ಲಿ ಪ್ರತಿವರ್ಷ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ದೇಶದ ಈ ಶ್ರೀಮಂತ ಗಣಪತಿಗೆ ನ್ಯೂ ಇಂಡಿಯಾ ಇನ್ಸೂರೆನ್ಸ್‌ ಕಂಪೆನಿಯಲ್ಲಿ 360 ಕೋಟಿ 40 ಲಕ್ಷ ರೂಪಾಯಿಗಳ ವಿಮೆ ಮಾಡಿಸಲಾಗಿದೆ.

LEAVE A REPLY

Please enter your comment!
Please enter your name here