ಪ್ರಾಣಿ ಪ್ರಪಂಚ-95

ವಾಲ್‌ರಸ್‌ (Odobenus rosmarus)

ಮಕ್ಕಳಿಗಾಗಿ ವಿಶೇವ ಮಾಹಿತಿ

ವಾಲ್‌ರಸ್‌ ಹೆಚ್ಚಾಗಿ ಆರ್ಟಿಕ್‌, ಅಂಟಾರ್ಟಿಕ್‌ ಹಾಗೂ ಪೆಸಿಫಿಕ್‌ ಮಹಾಸಾಗರದಲ್ಲಿ ಕಾಣಬಹುದು. ದಂತ, ಮೀಸೆ ಹಾಗೂ ದೈತ್ಯದೇಹದಿಂದ ಸುಲಭವಾಗಿ ಇದನ್ನು ಗುರುತಿಸಬಹುದು. ತೆವಳಲು ಇಬ್ಬದಿಯಲ್ಲಿ ತೆವಳುವ ರೆಕ್ಕೆ ಇವೆ.

ಸರಿ ಸುಮಾರು 25 ವರ್ಷ ಬದುಕುವಂತ ವಾಲ್‌ರಸ್‌ ಧೃವಪ್ರದೇಶದ ಐಸ್‌ ಗೆಡ್ಡೆಗಳ ಮೇಲೆ ಜೀವಿಸುತ್ತದೆ. ಗಂಡು ವಾಲ್ ರಸ್‌ 1700 ಕೆ.ಜಿ. ತೂಕವಿರುತ್ತದೆ. ಹೆಚ್ಚಾಗಿ ಮಾಂಸ, ದಂತಕ್ಕಾಗಿ ಶೇಖರಿತ ಕೊಬ್ಬಿಗಾಗಿ ವಾಲ್‌ರಸ್‌ನ್ನು ಬೇಟೆಯಾಡುವುದರಿಂದ 19ನೇ ಹಾಗೂ 20ನೇ ಶತಮಾನದಲ್ಲಿ ಇವುಗಳ ಸಂತತಿ ಇಳಿಮುಖವಾಗಿವೆ.

ದಂತಗಳ ಉದ್ದ ವಾಲ್‌ರಸ್‌ ಗಳ ವಯಸ್ಸನ್ನು ಸೂಚಿಸುತ್ತೆ. ದಂತಗಳು ಆಹಾರವನ್ನು (ಮಾಂಶ) ಚೀರಿ ತಿನ್ನಲು ಸಹಾಯಕವಾಗುವುದು. ವಾಲ್‌ರಸ್‌ ಗಳು ಹೆಚ್ಚಾಗಿ ಸಮುದ್ರದಲ್ಲಿನ ಚಿಪ್ಪು ಜೀವಿ (ಮಾಲಸ್ಕ್)ಗಳನ್ನು ಆಹಾರ ರೂಪವಾಗಿ ಸೇವಿಸುತ್ತದೆ. ಉದ್ದನೆಯ ದಂತಗಳು ವಾಲ್‌ರಸ್‌ ಗಳ ವಯಸ್ಸನ್ನು ಮುಂದಾಳತ್ವಿಕೆಯನ್ನು ಶಕ್ತಿಪೌರುಷವನ್ನು ತೋರುತ್ತದೆ.

 

LEAVE A REPLY

Please enter your comment!
Please enter your name here