ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಕರ್ನಾಟಕದ ಬೇಲೂರು, ಹಳೆಬೀಡು, ಸೋಮನಾಥಪುರದ ಹೊಯ್ಸಳ ದೇವಾಲಯಗಳು

ಮಂಗಳೂರು(ನವದೆಹಲಿ): ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳ ದೇವಾಲಯಗಳು ಸೇರ್ಪಡೆಯಾಗಿವೆ.

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಕರ್ನಾಟಕದ ಹಾಸನ ಜಿಲ್ಲೆ ಬೇಲೂರು ಮತ್ತು ಹಳೆಬೀಡಿನಲ್ಲಿರುವ ಹಾಗೂ ಮೈಸೂರು ಜಿಲ್ಲೆ ಸೋಮನಾಥಪುರದಲ್ಲಿರುವ ಹೊಯ್ಸಳ ದೇವಾಲಯಗಳು ಸ್ಥಾನ ಪಡೆದಿವೆ. ಈ ದೇವಾಲಯಗಳು ಕಲೆ, ವಾಸ್ತುಶಿಲ್ಪ, ಸಂಸ್ಕೃತಿಯ ಪ್ರತೀಕವಾಗಿದ್ದು, ಪ್ರಸ್ತುತ ಮೂರು ಸ್ಮಾರಕಗಳು ಯುನೆಸ್ಕೋ ತಾಣವಾಗಿ ಘೋಷಣೆಯಾಗಿವೆ. ಸೋಮನಾಥಪುರಲ್ಲಿರುವ ಕೇಶವ ದೇವಸ್ಥಾನ, ಬೇಲೂರಿನಲ್ಲಿರುವ ಚನ್ನಕೇಶವ ದೇವಸ್ಥಾನ ಹಾಗೂ ಹಳೆಬೀಡಿನಲ್ಲಿರುವ ಹೊಯ್ಸಳೇವರ ದೇವಸ್ಥಾನಗಳು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿವೆ.

LEAVE A REPLY

Please enter your comment!
Please enter your name here