ಮಂಗಳೂರು(ನವದೆಹಲಿ): ಮಹಿಳೆಯೊಬ್ಬರು 5 ಸಾವಿರಕ್ಕೂ ಹೆಚ್ಚು ಚೇಳುಗಳೊಂದಿಗೆ 33 ದಿನಗಳನ್ನು ಕಳೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕಾಂಚನ್ ಕೆಟ್ಕೆ ಈ ಸಾಹಸಕ್ಕೆ ಕೈಹಾಕಿದ ಮಹಿಳೆ. ಥಾಯ್ಲೆಂಡ್ ನಿವಾಸಿಯಾಗಿರುವ ಈಕೆ ಬರೋಬ್ಬರಿ 5,320 ವಿಷಕಾರಿ ಚೇಳುಗಳ ಜೊತೆ 12 ಚದರ ಮೀಟರ್ ಗಾಜಿನ ಕೋಣೆಯಲ್ಲಿ 33ದಿನ ವಾಸವಾಗಿದ್ದು ಗಿನ್ನೆಸ್ ವಿಶ್ವದಾಖಲೆ ಬರೆದಿದ್ದಾರೆ. 2002ರಲ್ಲೂ ಕಾಂಚನ್ ಕೆಟ್ಕೆ ಇದೇ ರೀತಿಯ ದಾಖಲೆಯನ್ನು ಮಾಡಿದ್ದರು. ಇಲ್ಲಿಯವರೆಗೆ ಕಾಂಚನ್ ಮಾಡಿದ ವಿಶ್ವ ದಾಖಲೆಯನ್ನು ಯಾರೂ ಈವರೆಗೆ ಮುರಿಯಲು ಸಾಧ್ಯವಾಗಿಲ್ಲ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಕಾಂಚನ್ 33 ದಿನಗಳ ಕಾಲ ಚೇಳುಗಳೊಂದಿಗೆ ವಾಸವಿದ್ದ ಸಮಯದಲ್ಲಿ 13 ಬಾರಿ ವಿಷಕಾರಿ ಚೇಳು ಕಚ್ಚಿದೆ. ಉತ್ತಮ ರೋಗನಿರೋಧಕ ಶಕ್ತಿ ಹೊಂದಿದ್ದ ಕಾರಣ ಯಾವುದೇ ಪರಿಣಾಮ ಬೀರಿರಲಿಲ್ಲ.