ಜನ ಸಂಪರ್ಕಕ್ಕೆ ಒಂದು ಹೆಜ್ಜೆ ಮುಂದೆ – ವಾಟ್ಸಪ್ ಚಾನೆಲ್ ಆರಂಭಿಸಿದ ದೇಶದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ

ಮಂಗಳೂರು(ಬೆಂಗಳೂರು): ರಾಜ್ಯದ ಜನತೆಯೊಂದಿಗೆ ಸಂಪರ್ಕವನ್ನು ಮತ್ತಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ವಾಟ್ಸಪ್ ಚಾನೆಲ್ ಆರಂಭಿಸಿದ್ದಾರೆ. ಈ ಮೂಲಕ ದೇಶದ ಸರ್ಕಾರವೊಂದರ ಮುಖ್ಯಸ್ಥರ ಪೈಕಿ ಮೊಟ್ಟಮೊದಲ ವಾಟ್ಸಪ್ ಚಾನೆಲ್ ಅನ್ನು ಆರಂಭಿಸಿದ ಹೆಗ್ಗಳಿಕೆಯು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಇನ್ನು ಜನ ಸಂಪರ್ಕದ ನಿಟ್ಟಿನಲ್ಲಿ ಮುಂದಡಿಯಿಟ್ಟವರು ಸಿಎಂ ಸಿದ್ದರಾಮಯ್ಯ ಅವರ ನಡೆಗೆ ನೆಟ್ಟಿಗರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಚಾನೆಲ್‌ನಲ್ಲಿ ಸಿಎಂ ದೈನಂದಿನ ಚಟುವಟಿಕೆ, ತೆಗೆದುಕೊಂಡ ಮಹತ್ವದ ನಿರ್ಧಾರಗಳು, ಸಭೆಗಳ ಪ್ರಮುಖ ಅಂಶಗಳು, ಹೊಸ ಯೋಜನೆ ಮಾಹಿತಿ, ಆರೋಪ ಅಥವಾ ಪ್ರಚಲಿತ ಘಟನೆಗಳಿಗೆ ಪ್ರತಿಕ್ರಿಯೆಗಳು ಸೇರಿದಂತೆ ಸಾಕಷ್ಟು ಮಾಹಿತಿಯ ನೇರವಾಗಿ ಸಿಗಲಿದೆ. ಇನ್ನು ಚಾನೆಲ್‌ಗಳಲ್ಲಿ ಬಂದ ಸಂದೇಶಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಇಮೋಜಿ ಬಳಸಿ ನೀಡುವ ಅವಕಾಶ ಇದೆ. ಸಿಎಂ ವಾಟ್ಸಪ್ ಚಾನೆಲ್ ಸೇರಬೇಕು ಎಂಬುವವರು ನಿಮ್ಮ ವಾಟ್ಸಪ್ ಚಾನಲ್ ಸೆಕ್ಷನ್‌ನಲ್ಲಿ Chief Minister of Karnataka ಎಂದು ಸರ್ಚ್ ಮಾಡಬೇಕು. ಬಳಿಕ ಸಿಎಂ ಅಧಿಕೃತ ಚಾನೆಲ್ ಕಾಣಿಸಲಿದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಮುಖ್ಯಮಂತ್ರಿಗಳ ಅಧಿಕೃತ ಚಾನಲ್ ಅನ್ನು ಸೇರಬಹುದು. ಸದ್ಯ ವಾಟ್ಸಪ್ ಪರಿಚಯ ಮಾಡಿರುವ ” ಚಾನೆಲ್ ಎಂಬ ಹೊಸ ಆಯ್ಕೆ ಸಿಗಬೇಕು ಎಂದರೆ ನಿಮ್ಮ ವಾಟ್ಸಪ್ ಅಪ್ಲೇಟ್ ಮಾಡಿಕೊಳ್ಳಬೇಕು. ಆ ಬಳಿಕ ಸ್ಟೇಟಸ್ ನೋಡುವ ಆಯ್ಕೆ ಬಳಿ ಬಂದರೆ ಅಲ್ಲಿಯೇ ಚಾನೆಲ್‌ಗಳು ಸಿಗುತ್ತವೆ. ಈಗಾಗಲೇ ಬಾಲಿವುಡ್ ತಾರೆಯರು, ಕ್ರಿಕೆಟ್ ಪಡುಗಳು ಸೇರಿದಂತೆ ಪ್ರಮುಖ ಸೆಲಿಬ್ರಿಟಿಗಳು ತಮ್ಮ ವ್ಯಾಟ್ಸಪ್ ಚಾನೆಲ್ ಆರಂಭಿಸಿದ್ದಾರೆ. ಇನ್ನು ಯಾರು ಬೇಕಾದರೂ ತಮ್ಮ ಹೆಸರಿನಲ್ಲಿ ಚಾನೆಲ್ ಆರಂಭಿಸುವ ಸೌಲಭ್ಯವನ್ನು ಮೇಟಾ ಕಂಪನಿ ನೀಡಿದೆ

LEAVE A REPLY

Please enter your comment!
Please enter your name here