ಆಕಸ್ಮಿಕ ಬೆಂಕಿ-ಇಲೆಕ್ಟ್ರಾನಿಕ್ಸ್ ಅಂಗಡಿ ಅಗ್ನಿಗಾಹುತಿ – ಲಕ್ಷಾಂತರ ರೂಪಾಯಿ ನಷ್ಟ

ಮಂಗಳೂರು(ಬಂಟ್ವಾಳ): ಆಕಸ್ಮಿಕವಾಗಿ ಬೆಂಕಿ ತಗುಲಿ ಇಲೆಕ್ಟ್ರಾನಿಕ್ ಅಂಗಡಿಯೊಂದು ಭಾಗಶಃ ಬೆಂಕಿಗಾಹುತಿಯಾದ ಘಟನೆ ಇಂದು ಮಧ್ಯಾಹ್ನ ವೇಳೆ ಬಂಟ್ವಾಳ ಬಡ್ಡಕಟ್ಟೆ ಎಂಬಲ್ಲಿ ನಡೆದಿದೆ.

ಸೆ.19ರಂದು ಬಂಟ್ವಾಳ ಪೇಟೆಯ ಬಡ್ಡಕಟ್ಟೆಯಲ್ಲಿರುವ ಪುರಸಭಾ ವಾಣಿಜ್ಯ ಮಳಿಗೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಅಗ್ನಿಶಾಮಕ ಸಿಬಂದಿ ಸ್ಥಳೀಯರೊಂದಿಗೆ ಬೆಂಕಿ ನಂದಿಸುವಲ್ಲಿ ಸಫಲರಾದರೂ ಅಂಗಡಿಯಲ್ಲಿದ್ದ ಸುಮಾರು ‌ಲಕ್ಷಾಂತರ ರೂ.ಬೆಲೆಬಾಳುವ ಟಿ.ವಿ.ಸಹಿತ ಅನೇಕ ಗೃಹೋಪಯೋಗಿ ಉಪಕರಣಗಳು  ಸುಟ್ಟುಕರಕಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

LEAVE A REPLY

Please enter your comment!
Please enter your name here