ವಾರ್ಥಾಗ್ (phacochoerus africanus)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಈ ಹಂದಿಗಳು ಸಾಕುಹಂದಿಯ ಜಾತಿಗೆ ಸೇರಿದೆ. ಆದರೆ ಬೇರೆ ಬೇರೆಯಾಗಿ ಕಾಣುತ್ತವೆ. ಈ ಬಲಿಷ್ಠ ಹಂದಿಗಳು ಅತ್ಯಂತ ಕುರೂಪಿ ಪ್ರಾಣಿಗಳಾಗಿವೆ. ಅವುಗಳ ದೊಡ್ಡ ಚಪ್ಪಟೆ ತಲೆಗಳ ಮೇಲೆ ನರೋಲಿ (ಕಲೆಗಳು)ಗಳಿದ್ದು ತಲೆಯನ್ನು ರಕ್ಷಿಸುತ್ತವೆ. ಇವುಗಳಿಗೆ ಹರಿತವಾದ ನಾಲ್ಕು ಕೋರೆಹಲ್ಲುಗಳಿರುತ್ತವೆ. ತಲೆಯ ಹಿಂದೆ ಕೂದಲು(ಕೇಸರ) ಗಳಿರುತ್ತವೆ.
ಹಂದಿಗಳು ಉಗ್ರವಾಗಿ ಕಂಡರೂ ಮೂಲತಃ ಅವು ಹುಲ್ಲು ಮೇಯದ ಶಾಕಾಹಾರಿಗಳಾಗಿವೆ. ತಮ್ಮ ಉದ್ದವಾದ ಮೂತಿಯಿಂದ ಗೆಡ್ಡೆಗೆಣಸುಗಳನ್ನು ಅಗೆಯುತ್ತವೆ. ಅಪಾಯಕ್ಕೊಳಗಾದಾಗ ಉಪವಾಸ ಮಾಡುತ್ತವೆ. 30 ಮೈಲು ವೇಗದಲ್ಲಿ ಓಡುತ್ತವೆ. ಒಣ ವಾತಾವರಣದಲ್ಲಿ ಬಹಳ ಕಾಲ ನೀರಿಲ್ಲದೆ ಬದುಕಬಲ್ಲವು. ನೀರು ದೊರೆತಾಗ ನೀರಿನಲ್ಲಿ ಮುಳುಗಿ ತಂಪಾಗುತ್ತವೆ. ಹಸಿ ಮಣ್ಣಿನಲ್ಲಿ, ಕೆಸರಲ್ಲಿ ಹೊರಳಾಡುತ್ತವೆ. ಹಕ್ಕಿಗಳು ಇವುಗಳಿಗೆ ಕ್ರಿಮಿಗಳನ್ನು ಕೊಲ್ಲಲು ಸಹಾಯ ಮಾಡುತ್ತವೆ. ಆಫ್ರಿಕಾದ ಹಂದಿಗಳು ಆಗಾಗ ಖಾಲಿ ಬಿಲಗಳನ್ನು ಉಪಯೋಗಿಸುತ್ತವೆ. ತಮ್ಮ ಬಿಲಗಳನ್ನು ಕಾಯಲು ಕೋರೆಹಲ್ಲುಗಳನ್ನು ಬಳಸುತ್ತವೆ. ಮರಿಗಳಿಗೆ ನಾಲ್ಕು ತಿಂಗಳು ಮೊಲೆಯುಣಿಸುತ್ತವೆ.