ಜೀಬ್ರಾ (Equus quagga)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಜೀಬ್ರಾ ಬೇರೆ ಪ್ರಾಣಿಗಳಿಗೆ ಇಲ್ಲದಂಥ ವಿಶಿಷ್ಟವಾದ ಹೊದಿಕೆಯು ಮೈಮೇಲೆ ಇದೆ. ಪ್ರತಿ ಪ್ರಾಣಿಗೆ ಭಿನ್ನ ವರ್ಣಗಳ ಪಟ್ಟಿಗಳಿವೆ. ಒಂದರಂತೆ ಮತ್ತೊಂದಿಲ್ಲ. ಜೀಬ್ರಾಗಳ ಪಟ್ಟಿಗಳ ಬಗ್ಗೆ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಅವುಗಳ ವಿಶಿಷ್ಟ ಪಟ್ಟಿಗಳಿಂದಲೇ ಅವುಗಳನ್ನು ಗುರುತಿಸಲು ಸಾಧ್ಯವಾಗುವುದು. ಜೀಬ್ರಾಗಳು ಯಾವಾಗಲೂ ಗುಂಪಿನಲ್ಲಿರುತ್ತವೆ. ಅವು ಒಟ್ಟಾಗಿ ಹುಲ್ಲು ಮೇಯುವುವು. ಒಂದನ್ನೊಂದು ಮಾಲೀಶು ಮಾಡುತ್ತವೆ. ಜೀಬ್ರಾಗಳು ಕುಟುಂಬಗಳಲ್ಲಿರುತ್ತವೆ. ಒಂದು ಗಂಡು, ಹಲವು ಹೆಣ್ಣುಗಳು, ಮರಿಗಳು – ಒಂದು ಕುಟುಂಬ, ಜೀಬ್ರಾಗಳು ಸದಾ ಸಿಂಹ, ಕತ್ತೆ ಕಿರುಬಗಳಿಂದ ಎಚ್ಚರದಿಂದಿರಬೇಕು. ಗುಂಪಿನ ಪ್ರಾಣಿಗಳು ದಾಳಿಗೊಳಗಾದಾಗ ಇಡೀ ಗುಂಪು ದಾರಿಕಾರರನ್ನು ಓಡಿಸುತ್ತವೆ.