ಸಮಾಜದಲ್ಲಿ ಬಾಲಕನ ಸ್ಥಾನಮಾನ
ಗಾಂಧಿಗಳು ಬನಿಯಾ(ವೈಶ್ಯ) ಜಾತಿಯ ಮೋದ್ ಎಂಬ ಉಪಜಾತಿಯವರು. ಮೋದ್ ಜಾತಿಗೆ ಹಿಂದೂ ಮೇಲ್ಜಾತಿಗಳಲ್ಲಿ ಎರಡನೆಯ ಸ್ಥಾನ. ವ್ಯಾಪಾರ ಅವರ ಕುಲ ಕಸುಬು. ಕರಮ್ಚಂದ್ ಉತ್ತಮ್ ಚಂದ್ ಗಾಂಧಿ (ಕಾಬಾ ಗಾಂಧಿ) ಪೋರ್ಬಂದರ್ ರಾಜ್ಯದ ದಿವಾನ ವೃತ್ತಿಯಲ್ಲಿದ್ದರು. ಅದು ಪ್ರತಿಷ್ಠಿತ ವೃತ್ತಿಯಾಗಿತ್ತು. ಆದ್ದರಿಂದ ಗಾಂಧಿ ಕುಟುಂಬಕ್ಕೆ ಗೌರವ ಮತ್ತು ಘನತೆಯ ಸ್ಥಾನಮಾನವಿತ್ತು. ತಾಯಿ ಪುತಲಿಬಾಯಿ ಧಾರ್ಮಿಕದಲ್ಲಿ ಹೆಚ್ಚು ನಂಬಿಕೆ ಉಳ್ಳವರಾಗಿದ್ದರು. ಮೋಹನ್ ದಾಸ್ ಗಾಂಧಿಯು ಬಾಲ್ಯದಿಂದಲೂ ಹಿಂದೂ ಮತ್ತು ಮುಸ್ಲಿಂ ಗೆಳೆಯರ ಜೊತೆ ಬೆರೆಯುತ್ತಿದ್ದರು. ಅವರ ಬಾಲ್ಯವು ಧಾರ್ಮಿಕ ಮತ್ತು ಉದಾರವಾದಿ ವಾತಾವರಣದಲ್ಲಿ ಅರಳಿತು.
ಗಾಂಧಿ