ಕಾಟಾಲಿನ್ ಕಾರಿಕೊ ಮತ್ತು ಡ್ರೂ ವೈಸ್‌ಮನ್ ಗೆ ನೊಬೆಲ್ ವೈದ್ಯಕೀಯ ಪ್ರಶಸ್ತಿ – ಡಿ.10 ರಂದು ಪ್ರಶಸ್ತಿ ಪ್ರದಾನ

ಮಂಗಳೂರು(ಸ್ವೀಡನ್): ಕೋವಿಡ್-19 ಲಸಿಕೆ ಅಭಿವೃದ್ಧಿಗೆ ಸುಗಮ ಮಾರ್ಗ ಕಲ್ಪಿಸಿದ್ದ ಮೆಸೆಂಜರ್ ಆರ್‌ಎನ್‌ಎ ತಂತ್ರಜ್ಞಾನ ಕುರಿತು ಕಾರ್ಯಕ್ಕಾಗಿ ಹಂಗೇರಿಯ ಕಾಟಾಲಿನ್ ಕಾರಿಕೊ ಮತ್ತು ಅಮೆರಿಕದ ಡ್ರೂ ವೈಸ್‌ಮನ್ ಅವರು ನೊಬೆಲ್ ವೈದ್ಯಕೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಾರಿಕೊ ಮತ್ತು ವೈಸ್‌ಮನ್ ಡಿ.10ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯಲಿರುವ ವಿಧ್ಯುಕ್ತ ಸಮಾರಂಭದಲ್ಲಿ ದೊರೆ ಕಾರ್ಲ್ 16ನೇ ಗುಸ್ತಾಫ್ ಅವರಿಂದ ಡಿಪ್ಲೋಮಾ, ಸ್ವರ್ಣ ಪದಕ ಮತ್ತು 10 ಲ.ಡಾ.ಗಳ ಚೆಕ್ಕನ್ನೊಳಗೊಂಡ ತಮ್ಮ ಬಹುಮಾನವನ್ನು ಸ್ವೀಕರಿಸಲಿದ್ದಾರೆ.

 

LEAVE A REPLY

Please enter your comment!
Please enter your name here