ಮಂಗಳೂರು(ಹಾಂಗ್‌ಝೌ): ಏಷ್ಯನ್ ಕ್ರೀಡಾಕೂಟದಲ್ಲಿ ಒಟ್ಟು 107 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಸಾರ್ವಕಾಲಿಕ ದಾಖಲೆ ಬರೆದಿದೆ. ಇದರಲ್ಲಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳು ಒಳಗೊಂಡಿವೆ. ಒಟ್ಟಾರೆಯಾಗಿ ಈ ಬಾರಿ ಅತಿ ಹೆಚ್ಚು ಪದಕಗಳನ್ನು ಗೆದ್ದ ದೇಶಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.
ಏಷ್ಯನ್ ಗೇಮ್ಸ್ ಪದಕ ಪಟ್ಟಿ ಇಂತಿದೆ:
1. ಚೀನಾ (ಚಿನ್ನ: 198, ಬೆಳ್ಳಿ: 108, ಕಂಚು: 68, ಒಟ್ಟು: 374)
2. ಜಪಾನ್ (ಚಿನ್ನ: 50, ಬೆಳ್ಳಿ: 63, ಕಂಚು: 69, ಒಟ್ಟು: 182)
3. ರಿಪಬ್ಲಿಕ್ ಆಫ್ ಕೊರಿಯಾ (ಚಿನ್ನ: 40, ಬೆಳ್ಳಿ: 58, ಕಂಚು: 88, ಒಟ್ಟು: 186)
4. ಭಾರತ (ಚಿನ್ನ: 28, ಬೆಳ್ಳಿ: 38, ಕಂಚು: 41, ಒಟ್ಟು: 107)
5. ಉಜ್ಬೇಕಿಸ್ತಾನ (ಚಿನ್ನ: 21, ಬೆಳ್ಳಿ: 18, ಕಂಚು: 31, ಒಟ್ಟು: 70)