



ಮಂಗಳೂರು(ಮುಂಬೈ): 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಭಾನುವಾರದಿಂದ ಆರ್ಬಿಐ ನ ಪ್ರಾದೇಶಿಕ ಕಚೇರಿಗಳಲ್ಲಿ ಮಾತ್ರವೇ ಬದಲಿಸಿಕೊಳ್ಳಬಹುದು.







2 ಸಾವಿರ ರೂಪಾಯಿ ಮುಖಬೆಲೆಯ 3.43 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದ್ದು, ಇನ್ನೂ 12 ಸಾವಿರ ಕೋಟಿ ರೂಪಾಯಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇವೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಬ್ಯಾಂಕ್ ಗಳಲ್ಲಿ ಠೇವಣಿ ಇಡುವ ಮತ್ತು ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವು ಶನಿವಾರಕ್ಕೆ ಮುಕ್ತಾಯ ಆಗಿದೆ. ಇನ್ನು ಆರ್ಬಿಐ ನ ಪ್ರಾದೇಶಿಕ ಕಚೇರಿಗಳಲ್ಲಿ ಮಾತ್ರವೇ ಬದಲಿಸಿಕೊಳ್ಳಬಹುದು.















