ಮಂಗಳೂರು(ಹೊಸದಿಲ್ಲಿ): ಭಾರತದ ಚುನಾವಣಾ ಆಯೋಗವು ಛತ್ತೀಸ್ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆಗಳಿಗೆ ಚುನಾವಣೆಯ ದಿನಾಂಕವನ್ನು ಘೋಷಿಸಿದೆ.
ಮಧ್ಯ ಪ್ರದೇಶದಲ್ಲಿ ನವೆಂಬರ್ 17 ರಂದು, ರಾಜಸ್ತಾನದಲ್ಲಿ ನವೆಂಬರ್ 23, ಮಿಜೋರಾಂ ನಲ್ಲಿ ನವೆಂಬರ್ 7 ರಂದು, ತೆಲಂಗಾಣದಲ್ಲಿ ನವೆಂಬರ್ 30 ರಂದು, ಛತ್ತೀಸ್ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 7 ರಂದು ಮೊದಲ ಹಂತ ಮತ್ತು ನವೆಂಬರ್ 17 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಮತ ಎಣಿಕೆಯು ಡಿ.3 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.