ಅ.14ರ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತೀಯ ತಂಡ ಕೇಸರಿ ಸಮವಸ್ತ್ರಗಳನ್ನು ಧರಿಸಲಿದೆಯೇ ?

ಮಂಗಳೂರು(ಹೊಸದಿಲ್ಲಿ): ಅ.14ರಂದು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಭಾರತೀಯ ತಂಡದ ಆಟಗಾರರು ಎಂದಿನ ನೀಲಿ ಸಮವಸ್ತ್ರದ ಬದಲಿಗೆ ಸಂಪೂರ್ಣ ಕೇಸರಿ ಅಥವಾ ಎದ್ದುಕಾಣುವ ಕೇಸರಿ ಬಣ್ಣದೊಂದಿಗಿನ ಸಮವಸ್ತ್ರಗಳನ್ನು ಧರಿಸಬೇಕೇ ಎಂಬ ಬಗ್ಗೆ ಹಾಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ. ಹಿರಿಯ ಕ್ರೀಡಾ ಪತ್ರಕರ್ತೆ ಶಾರದಾ ಉಗ್ರ ಈ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ಶಾರದಾ ಹೇಳಿರುವಂತೆ ಭಾರತೀಯ ಆಟಗಾರರು ನಿಜಕ್ಕೂ ಈ ಹೊಸ ಕೇಸರಿ ಜೆರ್ಸಿಗಳನ್ನು ಧರಿಸಿಕೊಂಡು ಆಡಿದರೆ ಪಂದ್ಯದ ಬಳಿಕ ಅವುಗಳನ್ನು ಹರಾಜು ಹಾಕಲಾಗುತ್ತದೆ ಮತ್ತು ದೊರೆಯುವ ಮೊತ್ತವನ್ನು ಯುನಿಸೆಫ್‌ಗೆ ದೇಣಿಗೆಯಾಗಿ ನೀಡಲಾಗುವುದು. ಇದೊಂದು ವ್ಯವಸ್ಥಿತ ಪ್ರಚಾರ ತಂತ್ರವಾಗಿರುವಂತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕ್ರಿಕೆಟ್ ವಿಶ್ವಕಪ್‌ನ ಇತ್ತೀಚಿನ ಅಭ್ಯಾಸ ಪಂದ್ಯವೊಂದರಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಕೇಸರಿ ಜೆರ್ಸಿಗಳನ್ನು ಧರಿಸಿದ್ದು ನೀಲಿ ಜೆರ್ಸಿಯನ್ನು ಕೈಬಿಡಲಾಗುತ್ತದೆಯೇ ಎಂಬ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.

 

LEAVE A REPLY

Please enter your comment!
Please enter your name here