‘ಕರಾವಳಿ ಭಾಗದವರು ನಮ್ಮ ದೇಶಕ್ಕೊಂದು ದೊಡ್ಡ ಆಸ್ತಿ. ಕಂಬಳ ಕ್ರೀಡೆಗೆ ಸರಕಾರ ಸಂಪೂರ್ಣ ಸಹಕಾರ ನೀಡಲು ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ನಡೆದ ಕಂಬಳ ಕರೆಪೂಜೆ ಕಾರ್ಯಕ್ರಮದಲ್ಲಿ ಭಾಗವಹಸಿ ಮಾತನಾಡಿದ ಅವರು, ಹುಟ್ಟೋ ಎಲ್ಲಾ ಹೋರಿಗಳು ಬಸವ ಆಗೋಕಾಗಲ್ಲ – ಹಾಗೇನೇ ಎಲ್ಲರೂ ನಾಯಕರಾಗೋಕೆ ಸಾಧ್ಯವಿಲ್ಲ. ದೇವರು ನಮಗೆ ಎರಡು ಆಯ್ಕೆ ಕೊಟ್ಟಿರ್ತಾರೆ – ಒಂದು ಕೊಟ್ಟು ಹೋಗೋದು ಇನ್ನೊಂದು ಬಿಟ್ಟು ಹೋಗೋದು. ಪುತ್ತೂರಿನ ಶಾಸಕ ಮಿತ್ರರು ಬೆಂಗಳೂರಿಗೆ ಬಂದು ತಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸುವ ಕಾರ್ಯ ಮಾಡ್ತಿದ್ದಾರೆ. ಕರಾವಳಿ ಭಾಗದ ಒಂದು ದೊಡ್ಡ ಸಂಸ್ಕೃತಿಯಾಗಿರುವ ಕಂಬಳಕ್ಕೆ ನಮ್ಮ ಪ್ರೋತ್ಸಾಹವಿದೆ ಎಂದು ಹೇಳುವ ಮೂಲಕ ಕರಾವಳಿ ಜನರ ಶಕ್ತಿ-ಸಾಮರ್ಥ್ಯ-ಬುದ್ದಿವಂತಿಕೆಯನ್ನುಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರಶಂಸಿಸಿದರು.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ