ಮಂಗಳೂರು(ಬೆಂಗಳೂರು): ಬೆಂಗಳೂರು ಕಂಬಳ ನಮ್ಮ ಕಂಬಳ ಹೆಸರಿನಲ್ಲಿ ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಕಂಬಳವನ್ನು ರಾಜ್ಯ ಮತ್ತು ದೇಶಕ್ಕೆ ಪರಿಚಯಿಸುವ ಪ್ರಯತ್ನ ನಮ್ಮದಾಗಿದೆ.
ರೀಲ್ ನಲ್ಲಿ ನೋಡಿದ ಕಂಬಳವನ್ನು ರಿಯಲ್ ಆಗಿ ನೋಡುವ ಅವಕಾಶ ಬೆಂಗಳೂರಿಗರಿಗೆ ಸಿಗಲಿದೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ತುಳು ಸಂಘಟನೆಗಳನ್ನು ಒಟ್ಟು ಸೇರಿಸಿಕೊಂಡು ಈ ಕಂಬಳ ಕೂಟವನ್ನು ಆಯೋಜನೆ ಮಾಡಲಾಗಿದೆ. ಕಂಬಳದ ಸೀಮೋಲ್ಲಂಘನಕ್ಕೆ ಪಕ್ಷಬೇಧವಿಲ್ಲದೆ ಸರ್ವರ ಬೆಂಬಲ ಕೋರಿದ ಶಾಸಕ ಅಶೋಕ್ ರೈ ನ.25-26ರಂದು ಆಯೋಜನೆಗೊಂಡಿರುವ ‘ಬೆಂಗಳೂರು ಕಂಬಳ’ಕ್ಕೆ ಎಲ್ಲರ ಬೆಂಬಲ ಕೋರಿದ್ದಾರೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ