ಐಟಿ ದಾಳಿ-ಮಂಚದ ಕೆಳಗೆ ಬಚ್ಚಿಟ್ಟ 24 ಬಾಕ್ಸ್‌ ನಲ್ಲಿ 42 ಕೋಟಿ ಹಣ ಪತ್ತೆ

ಮಂಗಳೂರು(ಬೆಂಗಳೂರು): ಕಾಂಗ್ರೆಸ್ ಮಾಜಿ ಕಾರ್ಪರೇಟರ್‌ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಅವರ ಬಾವಮೈದ ಪ್ರದೀಪ್ ಎಂಬಾತನ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಈ ವೇಳೆ ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದೆ. ಫ್ಲಾಟ್​ನಲ್ಲಿ ಬರೊಬ್ಬರಿ 23 ಬಾಕ್ಸ್​ಗಳಲ್ಲಿ 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಮಂಚದಡಿಯಲ್ಲಿ ಪತ್ತೆಯಾಗಿವೆ.

 

ಗುತ್ತಿಗೆದಾರ ಅಂಬಿಕಾಪತಿ ಅವರ ಪತ್ನಿಯಾಗಿರುವ ಮಾಜಿ ಕಾರ್ಪರೇಟರ್‌ ಅಶ್ವಥಮ್ಮ ಅವರು ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ಎನ್ನಲಾಗುತ್ತಿದೆ. ಅಶ್ವತಮ್ಮ 2001ರ ಕಾವಲ್ ಬೈರಸಂದ್ರ ವಾರ್ಡ್ ನ ಕಾರ್ಪೊರೇಟರ್ ಆಗಿದ್ದರು. ಈ ಫ್ಲಾಟ್ ನ್ನು ಅಶ್ವಥಮ್ಮ ತಮ್ಮ ಸಹೋದರ ಪ್ರದೀಪ್ ಅವರಿಗೆ ಕೊಡಿಸಿದ್ದರು ಎನ್ನಲಾಗಿದೆ. ಅಂಬಿಕಾಪತಿ ಅಶ್ವಥಮ್ಮ ದಂಪತಿಗಳಿಗೆ ಸೇರಿದ ಇತರ ಎರಡು ನಿವಾಸಗಳ ಮೇಲೂ ದಾಳಿ ನಡೆದಿದೆ. ಐಟಿ ದಾಳಿ ಸ್ವಲ್ಪ ತಡವಾಗುತ್ತಿದ್ದರೂ ಈ ಹಣ ಸಿಗುತ್ತಿರಲಿಲ್ಲ. ಈ ಬೃಹತ್ ಮೊತ್ತದ ಹಣವನ್ನು ತಮಿಳುನಾಡಿಗೆ ಸಾಗಿಸಲು ಸಿದ್ಧತೆ ನಡೆದಿತ್ತು ಎಂದು ತಿಳಿದುಬಂದಿದೆ. 42 ಕೋಟಿ ಹಣ ಸೀಜ್ ಮಾಡಿದ ಐಟಿ ಅಧಿಕಾರಿಗಳು. ಹಣದ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿಸಿದ್ದಾರೆ.

LEAVE A REPLY

Please enter your comment!
Please enter your name here