ಕೆ.ವಿ.ಜಿ. ಮೆಡಿಕಲ್ ಕಾಲೇಜ್ ವಾರ್ಷಿಕ ದಿನಾಚರಣೆ – ಜನಸೇವೆ ವೈದ್ಯಕೀಯ ವೃತ್ತಿಯ ಉದ್ದೇಶ-ಡಾ.ಶಿವಶರಣ್ ಶೆಟ್ಟಿ

ಮಂಗಳೂರು: ಜನರ ಆರೋಗ್ಯ ಸೇವೆ ನೀಡಿ ಅವರ ನೋವನ್ನು ನಿವಾರಿಸುವುದೇ ವೈದ್ಯಕೀಯ ವೃತ್ತಿಯ ಗುರಿ. ಪವಿತ್ರವಾದ ಈ ವೃತ್ತಿಯ ಉದ್ದೇಶ ಸಾಧಿಸುವಲ್ಲಿ ನೀವೆಲ್ಲ ಯಶಸ್ವಿಯಾಗಿರಿ. ಔಷಧಿ ವಿಜ್ಞಾನ. ಆದರೆ ನೀವು ನೀಡುವ ಆರೋಗ್ಯ ಸೇವೆ ಒಂದು ಕಲೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ ಹೇಳಿದ್ದಾರೆ.

ಅ.12 ರಂದು ಕಾಲೇಜ್ ಸಭಾಂಗಣದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ವಾರ್ಷಿಕೋತ್ಸವ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಅಕಾಡೆಮಿ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾರ್ಯದರ್ಶಿ ಕೆ.ವಿ.ಹೇಮನಾಥ್, ಮೆಡಿಕಲ್ ಕಾಲೇಜ್ ಡೀನ್ ಡಾ.ನೀಲಾಂಬಿಕೆ ನಟರಾಜನ್, ಮೆಡಿಕಲ್ ಸುಪರಿಂಟೆಂಡೆಂಟ್ ಡಾ.ಗೋಪಿನಾಥ್ ಶೆಣೈ, ಸೈಕ್ರಿಯಾಟ್ರಿಕ್ ವಿಭಾಗದ ಎಚ್.ಒ.ಡಿ. ಡಾ.ಪೂನಂ, ಸ್ಟೂಡೆಂಟ್ ಕೌನ್ಸಿಲ್ ಅಧ್ಯಕ್ಷೆ ಡಾ.ಗ್ರೀಷ್ಮ ಉನ್ನಿಕೃಷ್ಣನ್, ಉಪಾಧ್ಯಕ್ಷ ಡಾ.ಮನೋಜ್ ಗೌಡ, ಪ್ರಧಾನ ಕಾರ್ಯದರ್ಶಿ ಶ್ರೀವತ್ಸ ಕೆ., ಜತೆ ಕಾರ್ಯದರ್ಶಿ ಜಾಸ್ಮಿನ್ ಧಾಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಇ-ಮ್ಯಾಗಝಿನ್ ಸ್ವಾಸ್ಥ್ಯವನ್ನು ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಬಿಡುಗಡೆಗೊಳಿಸಿದರು. ಮ್ಯಾಗಝಿನ್ ಸಂಪಾದಕ ಬಯೋ ಕೆಮಿಸ್ಟ್ರಿ ವಿಭಾಗ ಮುಖ್ಯಸ್ಥ ಡಾ.ಶಿವರಾಜ್ ಶಂಕರ್ ಮ್ಯಾಗಝಿನ್ ಪರಿಚಯಗೈದರು. ಡಾ.ಶ್ರುತಿ ರೈ ಮುಖ್ಯ ಅತಿಥಿ ಡಾ.ಶಿವಶರಣ್ ಶೆಟ್ಟಿ ಅವರನ್ನು ಪರಿಚಯಿಸಿದರು.ಎಲ್ಲಾ ವಿಭಾಗಗಳು ಮತ್ತು ಸಬ್ಜೆಕ್ಟ್ ಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಟೂಡೆಂಟ್ ಕೌನ್ಸಿಲ್ ಚೀಫ್ ಅಡ್ವೈಸರ್ ಡಾ.ಗೀತಾ ದೊಪ್ಪ ಸ್ವಾಗತಿಸಿದರು. ಡೀನ್ ಡಾ.ನೀಲಾಂಬಿಕೆ ನಟರಾಜನ್ ಕಾಲೇಜಿನ ಕಾರ್ಯಚಟುವಟಿಕಗಳ ವಿವರವಾದ ವರದಿ ವಾಚಿಸಿದರು.

 

 

LEAVE A REPLY

Please enter your comment!
Please enter your name here