ಇಂದು(ಅ.13) ದೇಶದಾದ್ಯಂತ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್‌ ದರ 99 ರೂ. ಮಾತ್ರ

ಮಂಗಳೂರು(ನವದೆಹಲಿ): ದೇಶದಾದ್ಯಂತ ಇರುವ 4 ಸಾವಿರಕ್ಕೂ ಅಧಿಕ ಮಲ್ಟಿಫ್ಲೆಕ್ಸ್‌ಗಳಲ್ಲಿ ಇಂದು(ಅ.13) ನೀವು ಯಾವುದೇ ಸಿನಿಮಾವನ್ನು 99 ರೂಪಾಯಿ ಟಿಕೆಟ್‌ ಖರೀದಿಸಿ ನೋಡಬಹುದು. ಈ ಅವಕಾಶ ಪುತ್ತೂರಿನ ಮಲ್ಟಿಫೆಕ್ಸ್‌ ಗಳಲ್ಲೂ ಲಭ್ಯವಿದೆ.

ದೇಶದಲ್ಲಿ ಅ.13 ಅನ್ನು ರಾಷ್ಟ್ರೀಯ ಸಿನಿಮಾ ದಿನ ಎಂದು ಆಚರಣೆ ಮಾಡಲಾಗುತ್ತದೆ. ಇದರ ಸಲುವಾಗಿ ಇಂದು ದೇಶದ ಮಲ್ಟಿಫ್ಲೆಕ್ಸ್‌ಗಳಲ್ಲಿ ಯಾವುದೇ ಸಿನಿಮಾವನ್ನು 99 ರೂಪಾಯಿ ದರದಲ್ಲಿ ಟಿಕೆಟ್‌ ಖರೀದಿಸಿ ನೋಡಬಹುದು ಎಂದು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಟನೆಯಲ್ಲಿ ತಿಳಿಸಿದೆ. ಟ್ವೀಟ್‌ನಲ್ಲಿ ಮಾಹಿತಿ ನೀಡಿರುವ ಅಸೋಸಿಯೇಷನ್‌, ಅ.13 ರಂದು ರಾಷ್ಟ್ರೀಯ ಸಿನಿಮಾ ದಿನ. ಸಿನಿಮೀಯ ಅನುಭವಕ್ಕಾಗಿ ಭಾರತದಾದ್ಯಂತ 4000ಕ್ಕೂ ಹೆಚ್ಚು ಪರದೆಗಳಲ್ಲಿ ನಮ್ಮೊಂದಿಗೆ ಜೊತೆಯಾಗಿದೆ. ಇಂದು ಚಲನಚಿತ್ರ ಟಿಕೆಟ್‌ಗಳ ಬೆಲೆ ಕೇವಲ ರೂ. 99ಕ್ಕೆ ಇಳಿಕೆಯಾಗಲಿದೆ. ಇದು ನಿಮ್ಮ ನೆಚ್ಚಿನ ಚಲನಚಿತ್ರಗಳನ್ನು ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಆನಂದಿಸಲು ವಿಶೇಷ ದಿನವಾಗಿದೆ ಎಂದು ಬರೆದುಕೊಂಡಿದೆ.

LEAVE A REPLY

Please enter your comment!
Please enter your name here