ಗಾಂಧಿ-ಸಂಕ್ಷಿಪ್ತ ಜೀವನ ಕಥನ – 18

ಬ್ರಿಟಿಷರೇ ಭಾರತ ಬಿಟ್ಟು ಹೊರಡಿ

ಎರಡನೇ ಮಹಾಯುದ್ಧವು ಪ್ರಾರಂಭವಾಗಿತ್ತು. ಬ್ರಿಟಿಷರು ಮತ್ತೊಮ್ಮೆ ಯುದ್ದದಲ್ಲಿ ಸಹಕರಿಸುವಂತೆ ಕಾಂಗ್ರೆಸ್ಸನ್ನು ಕೇಳಿದರು. ಎರಡು ಬಾರಿ ಬ್ರಿಟಿಷರು ವಚನ ಭ್ರಷ್ಟರಾಗಿದ್ದರು. ಜನತಂತ್ರದ ರಕ್ಷಣೆಗಾಗಿ ಹೂಡಿರುವ ಈ ಯುದ್ಧಕ್ಕೆ ಭಾರತೀಯರು ನೆರವಾಗಲೇ ಬೇಕು ಎಂಬುದು ಬ್ರಿಟಿಷರ ವಾದವಾಗಿತ್ತು. ಆದರೆ ಅದೇ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡದೆ ಜನತಂತ್ರವನ್ನು ಸ್ಥಾಪಿಸಲು ತೊಡಕಾಗಿದ್ದರು. ಎರಡನೆ ಮಹಾಯುದ್ಧದಲ್ಲಿ ಭಾರತವು ಭಾಗಿಯಾಗಲು ಗಾಂಧಿ ಸಮ್ಮತಿಸಲಿಲ್ಲ. ಯುದ್ಧವು ಮುಂದುವರೆಯುತ್ತಿತ್ತು. ಗಾಂಧಿ ಹೋರಾಟವನ್ನು ತೀವ್ರ ಗೊಳಿಸಿದರು. 1942ರಲ್ಲಿ ಕಾಂಗ್ರೆಸ್‌ “ಭಾರತ ಬಿಟ್ಟು ಹೊರಡಿ” ನಿರ್ಧಾರವನ್ನು ಪ್ರಕಟಿಸಿತು. ದೇಶಾದ್ಯಂತ ನೂರಾರು ಸಂಘಟನೆಗಳು ಮತ್ತು ಲಕ್ಷಾಂತರ ಜನ ಭಾಗವಹಿಸಿದರು. ಈ ಹೋರಾಟವು ಬಾರತಕ್ಕೆ ಸಂಪೂರ್ಣ ಸ್ವರಾಜ್ಯ-ವ್ಯವಸ್ಥೆಯನ್ನು ನೀಡಿ ಬ್ರಿಟಿಷ್‌ ಸರ್ಕಾರವು ದೇಶವನ್ನು ಬಿಟ್ಟು ಹೊರಡಲೇ ಬೇಕಾದ ಪರಿಸ್ಥಿತಿಗೆ ತಂದು ನಿಲ್ಲಿಸಿತು.

LEAVE A REPLY

Please enter your comment!
Please enter your name here