ಗಾಂಧಿ-ನೆಹರೂ
ಸ್ವಾತಂತ್ರ್ಯ ಚಳುವಳಿಯಲ್ಲಿ ನೆಹರೂ ಗಾಂಧಿಯವರ ಮೆಚ್ಚಿನ ಹೋರಾಟಗಾರ ಸಂಗಾತಿಯಾಗಿದ್ದರು. ಬ್ರಿಟಿಷರು ದೇಶತ್ಯಾಗ ಮಾಡಿದ ನಂತರ ಭಾರತವನ್ನು ಮುನ್ನಡೆಸುವ ಬಗ್ಗೆ ಚಳುವಳಿ ಮುಂಚೂಣಿ ನಾಯಕರಾಗಿದ್ದ ಹಲವರೊಂದಿಗೆ ಗಾಂಧಿ ದೇಶದ ಭವಿಷ್ಯದ ಬಗ್ಗೆ ಚರ್ಚಿಸುತ್ತಿದ್ದರು. ಯಾವುದೇ ವಿಷಯದಲ್ಲಿ ತಮ್ಮ ಸೌಮ್ಯನೀತಿಯನ್ನು ಮುಂದುವರಿಸುವ ನಾಯಕನಿಗೆ ಈ ಜವಾಬ್ದಾರಿಯನ್ನು ವಹಿಸಬೇಕೆಂಬುದು ಅವರ ಹಂಬಲವಾಗಿತ್ತು.
ಇತರರಿಗಿಂತ ನೆಹರೂ ಅವರಲ್ಲಿ ರಾಷ್ಟ್ರ ನಿರ್ಮಾಣದ ಇಂತಹ ಸಾಮರ್ಥ್ಯ ಮತ್ತು ವಿಶಾಲ ದೃಷ್ಟಿಯು ಇದೆ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಅವರು ನೆಹರೂ ಜೊತೆ ಈ ಬಗ್ಗೆ ಹಲವಾರು ಸಮಾಲೋಚನೆಗಳನ್ನು ನಡೆಸುತ್ತಿದ್ದರು. ಇಬ್ಬರೂ ಕೂಡಿ ಸ್ವರಾಜ್ಯದ ನೀಲಿಕ್ಷೆಯನ್ನು ಸಿದ್ಧಗೊಳಿಸುವಲ್ಲೆ ನಿರತರಾದರು. ಗಾಂಧಿ ಮತ್ತು ನೆಹರೂ ಹಾಗೂ ಅವರುಗಳೊಂದಿಗೆ ಜವಾಬ್ದಾರಿಯನ್ನು ಹಂಚಿಕೊಂಡ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರುಗಳನ್ನು ಅವರನ್ನು ಸ್ವಾತಂತ್ರ್ಯ ಭಾರತದ ರೂವಾರಿಗಳೆಂದು ಕರೆಯಲಾಗುತ್ತದೆ.