ಜಾತ್ರೆ ವ್ಯಾಪಾರಸ್ಥರ ಹೋರಾಟಕ್ಕೆ ಜಯ – ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಬಿಟ್ಟು ಕೊಟ್ಟ ಸಾಮರಸ್ಯ ಮೆರೆದ ಹಿಂದೂ ಬಾಂಧವರು

ಮಂಗಳೂರು : ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಜಾಗ ನಿರಾಕರಣೆ ವಿರುದ್ಧ ಜಾತ್ರೆ ಮತ್ತು ಬೀದಿಬದಿ ವ್ಯಾಪಾರಸ್ಥರ ಹೋರಾಟಕ್ಕೆ ಜಯ ಲಭಿಸಿದೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷ ಬಿ.ಕೆ ಇಮ್ತಿಯಾಝ್ ತಿಳಿಸಿದ್ದಾರೆ.

ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ನಡೆದ ಬಹಿರಂಗ ಮರುಏಲಂ ನಲ್ಲಿ ಪಾಲ್ಗೊಂಡು ಮುಸ್ಲಿಂ ವ್ಯಾಪಾರಿಗಳು ವ್ಯಾಪಾರಕ್ಕೆ ಜಾಗ ಪಡೆದುಕೊಂಡಿದ್ದಾರೆ. ಈಗಾಗಲೇ ಹರಾಜಿನಲ್ಲಿ ಪಡೆದುಕೊಂಡ ಹಿಂದೂ ಜಾತ್ರೆ ವ್ಯಾಪಾರಿಗಳು ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಬಿಟ್ಟು ಕೊಟ್ಟು ಸಾಮರಸ್ಯ ಮೆರೆದಿದ್ದಾರೆ. ಜಾತ್ರೆ ವ್ಯಾಪಾರಿಗಳು ಜಾತಿ ಧರ್ಮ ಭೇಧವಿಲ್ಲದೆ ಸಹೋದರರಂತೆ ಬದುಕುತ್ತಿದ್ದಾರೆ. ಬಡ ಜಾತ್ರೆ ವ್ಯಾಪಾರಿಗಳ ನಡುವೆ ದ್ವೇಷ ಹರಡಲು ಯತ್ನಿಸಿದ ಶಕ್ತಿಗಳಿಗೆ ಸೋಲಾಗಿದೆ ಹೋರಾಟವನ್ನು ಬೆಂಬಲಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಬಿ.ಕೆ ಇಮ್ತಿಯಾಝ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here