₹2 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ – ನೈಜೇರಿಯಾ ಪ್ರಜೆ ವಿಕ್ಟರ್‌ ಒಬಿನ್ನಾ ಚುಕ್ವುಡಿ ಪೊಲೀಸ್ ವಶಕ್ಕೆ

ಮಂಗಳೂರು(ಬೆಂಗಳೂರು):ರಾಜ್ಯ ರಾಜಧಾನಿ ಬೆಂಗಳೂರಿನ ದೊಡ್ಡ ನಾಗಮಂಗಲದ ವೀರಭದ್ರಸ್ವಾಮಿ ಲೇಔಟ್‌ನ ಮನೆಯೊಂದರ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬರೋಬ್ಬರಿ ₹2 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ. ನೈಜೀರಿಯಾ ಪ್ರಜೆ ವಿಕ್ಟರ್ ಒಬಿನ್ನಾ ಚುಕ್ವುಡಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯಿಂದ 2 ಕೆ.ಜಿ 43 ಗ್ರಾಂ ಎಂಡಿಎಂಎ ಡ್ರಗ್ಸ್, ಎರಡು ಮೊಬೈಲ್, ತೂಕದ ಯಂತ್ರ ಜಪ್ತಿ ಮಾಡಲಾಗಿದೆ.

ಆರೋಪಿ ವಿಕ್ಟರ್ ಹಲವು ವರ್ಷಗಳ ಹಿಂದೆಯೇ ದೆಹಲಿಯಿಂದ ಬೆಂಗಳೂರಿಗೆ ಬಂದು ನಗರದ ವೀರಭದ್ರಸ್ವಾಮಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾನೆ. ನೈಜೀರಿಯಾದ ಪೆಡ್ಲರ್ ಮೆಸ್ಸೊ ಎಂಬಾತ ದೆಹಲಿಯಲ್ಲಿ ನೆಲೆಸಿದ್ದು, ಈತನೊಂದಿಗೆ ಆರೋಪಿ ವಿಕ್ಟರ್ ಒಡನಾಟ ಇಟ್ಟುಕೊಂಡಿದ್ದನು. ದೆಹಲಿಯಿಂದ ಡ್ರಗ್ಸ್‌ ತರಿಸುತ್ತಿದ್ದ ವಿಕ್ಟರ್ ತಾನು ನೆಲೆಸಿರುವ ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದ. ಬಳಿಕ ತಾನೇ ಡ್ರಗ್ಸ್‌ ಅನ್ನು ಪೊಟ್ಟಣಗಳಲ್ಲಿ ತುಂಬಿ ಪ್ಯಾಕ್‌ ಮಾಡಿ, ಮಾರಾಟ ಮಾಡುತ್ತಿದ್ದ. ನಗರದಲ್ಲಿ ನಡೆಯುವ ಹಲವು ಪಾರ್ಟಿಗಳಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಈತನ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿ ವಿಕ್ಟರ್​ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಮೆಸ್ಸೊ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.

LEAVE A REPLY

Please enter your comment!
Please enter your name here