ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪನ-ಭಯಭೀತರಾದ ನಾಗರಿಕರು

ಮಂಗಳೂರು(ಕಠ್ಮಂಡು): ಅ.21ರಂದು ಬೆಳಗ್ಗೆ 7.39ರ ಸುಮಾರಿಗೆ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿದೆ.

ಭೂಕಂಪನದ ಅನುಭವ ಆಗುತ್ತಲೇ ಭಯಭೀತರಾದ ಜನ ಮನೆಯಿಂದ ಹೊರಗೋಡಿ ಬಂದಿದ್ದಾರೆ. ಭೂಕಂಪನದಿಂದ ಯಾವುದೇ ಹಾನಿ ಅಥವಾ ಸಾವು-ನೋವು ಸಂಭವಿಸಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ. ಕಠ್ಮಂಡು ಮಾತ್ರವಲ್ಲದೆ, ಇತರ ಜಿಲ್ಲೆಗಳಾದ ಬಾಗ್ಮತಿ ಹಾಗೂ ಗಂಡಕಿ ಪ್ರಾಂತ್ಯಗಳಲ್ಲೂ ಭೂಕಂಪನದ ಅನುಭವವಾಗಿದೆ. ಅ.16ರಂದು, ನೇಪಾಳದ ಸುದುರ್ಪ್‍ಶ್ಚಿಮ್ ಪ್ರಾಂತ್ಯದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿತ್ತು. 2015ರಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ಹಾಗೂ ನಂತರದ ಭೂಕಂಪನಗಳಿಂದಾಗಿ ಸುಮಾರು 9,000 ಮಂದಿ ಮೃತಪಟ್ಟಿದ್ದರು. ಇಡೀ ವಿಶ್ವದಲ್ಲಿ ಅತಿ ಹೆಚ್ಚು ಭೂಕಂಪಕ್ಕೀಡಾಗುವ ದೇಶಗಳ ಪೈಕಿ ನೇಪಾಳ 11ನೆಯ ಸ್ಥಾನದಲ್ಲಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here