ನವರಾತ್ರಿಯ 9ನೇ ದಿನವಾದ ಮಹಾನವಮಿಯಂದು ಸಿದ್ದಿದಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಈ ದಿನ ಕನ್ಯಾ ಪೂಜೆಯೊಂದಿಗೆ ದುರ್ಗಾದೇವಿಯ ಪೂಜೆಯನ್ನು ಮಾಡಲಾಗುತ್ತದೆ. ಸಿದ್ದಿದಾತ್ರಿಯನ್ನು ಪಾರ್ವತಿ ದೇವಿಯ 9ನೇ ರೂಪವೆಂದು ಪರಿಗಣಿಸಲಾಗಿದೆ. ಸಿದ್ದಿದಾತ್ರಿ ಅವತಾರವು ಶಕ್ತಿಯುತವಾಗಿದ್ದು ಆಕೆಗೆ 4 ತೋಳುಗಳಿವೆ. ಬಲಭಾಗದ ಕೈಗಳಲ್ಲಿ ಚಕ್ರ ಮತ್ತು ಗದೆಯನ್ನು ಹಿಡಿದಿರುವ ತಾಯಿ ಎಡಭಾಗದ ಕೈಗಳಲ್ಲಿ ಶಂಕ ಮತ್ತು ಕಮಲದ ಹೂವನ್ನು ಹೊಂದಿದ್ದಾಳೆ. ಅತ್ಯಂತ ಸುಂದರ ರೂಪ ಹೊಂದಿರುವ ಮಹಾತಾಯಿ ಈ ಆಯುಧಗಳಿಂದ ರಾಕ್ಷಸರನ್ನು ಸಂಹರಿಸುತ್ತಾಳೆ. ದೇವಿಯ ಸಾರಥಿ ಸಿಂಹವಾಗಿದ್ದು, ಕಮಲದ ಹೂವಿನ ಮೇಲೆ ವಿರಾಜಮಾನಳಾಗಿರುವ ಸಿದ್ದಿದಾತ್ರಿ ದೇವಿಯನ್ನು ಧ್ಯಾನಿಸಿ ಪೂಜಿಸುವುದರಿಂದ ತಾಯಿ ಪ್ರಸನ್ನಳಾಗಿ ಭಕ್ತರಿಗೆ ಸಂತೋಷ, ಸಮೃದ್ದಿ ಮತ್ತು ಅಧೃಷ್ಟವನ್ನು ಅನುಗ್ರಹಿಸುತ್ತಾಳೆ.
ಸಿದ್ದಿದಾತ್ರಿ ಪೂಜೆ ವಿಧಾನ
ಸಿದ್ದಿದಾತ್ರಿಗೆ ದೂಪದ ದೀಪವನ್ನು ಬೆಳಗುವ ಮೂಲಕ ವಿಧಿವಿದಾನಗಳಂತೆ ಪೂಜಿಸಬೇಕು ನವಮಿ ಪೂಜೆಯನ್ನು ಮಾಡುವುದರೊಂದಿಗೆ ಒಂಬತ್ತು ಹೆಣ್ಣುಮಕ್ಕಳನ್ನು ಪೂಜಿಸುವ ಕನ್ಯಾಪೂಜೆ ಮಾಡುವ ಮೂಲಕ ನವರಾತ್ರಿ ಉದ್ಯಾಪನವನ್ನು ಮಾಡಬಹುದು. ತಾಯಿಗೆ ಮಲ್ಲಿಗೆ ಹೂವನ್ನು ಅರ್ಪಿಸಿ ಒಂಬತ್ತು ರೀತಿಯ ಹೂವು, ಒಂಬತ್ತು ವಿಧಧ ಹಣ್ಣುಗಳು, ಒಂಬತ್ತು ವಿಧದ ಒಣ ಹಣ್ಣುಗಳನ್ನು ಅರ್ಪಿಸಬೇಕು.
ಸಿದ್ದಿದಾತ್ರಿ ಕಥೆ
ಸಿದ್ದಿದಾತ್ರಿ ಎಂದರೆ ಇಷ್ಟಾರ್ಥಗಳನ್ನು ಪೂರೈಸುವವಳು ಎಂದರ್ಥ. ಮಾತೆ ಸಿದ್ದಿದಾತ್ರಿ ತನ್ನ ಆಶಿರ್ವಾದದ ರೂಪವಾಗಿ ಶಿವನಿಗೆ ಎಲ್ಲಾ ಸಿದ್ದಿಗಳನ್ನು ನೀಡಿದಳು ಎಂದು ಪುರಾಣ ಹೇಳುತ್ತದೆ. ಶಿವನು ದೇವಿಯನ್ನು ಸಮರ್ಪಣೆಯೊಂದಿಗೆ ಪೂಜಿಸಿದಾಗ ಅವನ ದೇಹದ ಅರ್ಧ ಭಾಗವು ಶಕ್ತಿಯ ರೂಪದೊಂದಿಗೆ ಐಕ್ಯವಾಗುತ್ತದೆ. ಹೀಗಾಗಿ ಶಿವನನ್ನು ಅರ್ಧನಾರೀಶ್ವರ ಎಂದು ಕರೆಯುತ್ತಾರೆ.
ಸಿದ್ದಿದಾತ್ರಿ ಮಂತ್ರ
ಯಾ ದೇವಿ ಸರ್ವಾ ಭುತೇಶ್ವರ ಸಿದ್ದಿದಾತ್ರಿ ರೂಪನೇ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಓಂ ದೇವಿ ಸಿದ್ದಿದಾತ್ರಿಯೈ ನಮಃ ಓಂ ದೇವಿ ಸಿದ್ದಿದಾತ್ರಿಯೈ ನಮಃ
ಸಿದ್ದ ಗಂದರ್ವ ಯಕ್ಷದ್ಯರಸುರೈರಮಾರೈರಪಿ ಸೆವ್ಯಾಮಾನಾ ಸದಾಭುಯತ್ ಸಿದ್ಧಿದಾ ಸಿದ್ದಿದಾಯಿನಿ