ಕರ್ನೂಲ್ ನಲ್ಲಿ ವಿಜಯದಶಮಿ ಆಚರಣೆ – ದೇವರಗಟ್ಟು ಬನ್ನಿ ಉತ್ಸವದ ದಂಡ ಕಾಳಗ – 3 ಮಂದಿ ಸಾವು, ನೂರಕ್ಕೂ ಅಧಿಕ ಜನರಿಗೆ ಗಾಯ

ಮಂಗಳೂರು(ಕರ್ನೂಲ್): ವಿಜಯದಶಮಿ ಅಂಗವಾಗಿ ನಡೆದ ದೇವರಗಟ್ಟು ಬನ್ನಿ ಉತ್ಸವದ ದಂಡ ಕಾಳಗದಲ್ಲಿ ಮೂವರು ಮೃತಪಟ್ಟಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯನ್ನು ಕೊಂಡೊಯ್ಯುವಾಗ ದಂಡ ಕಾಳಗ ನಡೆಸಲಾಗಿದ್ದು, ಮೂವರು ಸಾವನ್ನಪ್ಪಿ, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಲ್ಲಮ್ಮ ಮತ್ತು ಮಲ್ಲೇಶ್ವರ ಸ್ವಾಮಿ ಉತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಮಲ್ಲಮ್ಮ ಮತ್ತು ಮಲ್ಲೇಶ್ವರ ಸ್ವಾಮಿ ಅಸುರರನ್ನು ಹತ್ಯೆ ಮಾಡಿದ ಬಳಿಕ ಈ ಉತ್ಸವನ್ನು ಆಚರಿಸಲಾಗುತ್ತದೆ. ದೇವರ ಮೆರವಣಿಗೆ ಸಂದರ್ಭ ನೆರಾನಿ, ನೆರಾನಿ ತಾಂಡಾ ಮತ್ತು ಕೊತ್ತಪೇಟ್ನ ಗ್ರಾಮಸ್ಥರು ಒಂದು ಗುಂಪು ಮಾಡಿ, ಆಲೂರು, ಸುಲುವಾಯಿ, ಇಲ್ಲಾರ್ತಿ, ಅರಿಕೇರಾ, ನಿದ್ರಾವಟ್ಟಿ, ಬಿಲೆಹಾಲ್ ಗ್ರಾಮಸ್ಥರು ಮತ್ತೊಂದು ಗುಂಪು ಮಾಡಿ ಉತ್ಸವ ಮೂರ್ತಿ ಎದುರು ಮುಖಾಮುಖಿಯಾದರು. ಬಳಿಕ ಮೆರವಣಿಗೆ ಸಂದರ್ಭ ಎರಡು ಗುಂಪುಗಳು ದಂಡ ಕಾಳಗ ನಡೆಸಿದರು. ಈ ವೇಳೆ, ಎರಡು ಗುಂಪಿನಲ್ಲಿನ ನೂರಾರು ಜನರಿಗೆ ಗಂಭೀರ ಗಾಯಗಳಾಗಿದೆ. ಈ ಉತ್ಸವವನ್ನು ನೋಡಲು ಆಂಧ್ರಪ್ರದೇಶ, ತೆಲಂಗಾಣ ಮಾತ್ರವಲ್ಲದೇ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದರು.

 

LEAVE A REPLY

Please enter your comment!
Please enter your name here