ಮಂಗಳೂರು: ಬಿಲ್ಲವ ಸಮಾಜದ ಸಹಕಾರದೊಂದಿಗೆ ಮಂಗಳೂರಿನ ಬಿಲ್ಲವ ಬ್ರಿಗೇಡ್ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಕ್ಕೆ ಸೂರು ಕಲ್ಪಿಸುವ ನಂದಾದೀಪ ವಸತಿ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ 4ನೇ ಮನೆಯನ್ನು ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದಲ್ಲಿ ಫಲಾನುಭವಿಗಳಾದ ಸುಂದರಿ ಪೂಜಾರಿ ಮತ್ತು ಕು.ಆಶ್ರಿತ ಅವರಿಗೆ ಹಸ್ತಾಂತರಿಸಲಾಯಿತು. ನ.1ರಂದು ಮನೆಯ ಗೃಹಪ್ರವೇಶ ಕಾರ್ಯಕ್ರಮವು ಬಿಲ್ಲವ ಮುಖಂಡರಾದ ಬೇಬಿ ಕುಂದರ್, ಪಂಚಾಯತ್ ಸದಸ್ಯ ಹೇಮಂತ್ ಸಜೀಪ, ಬಿಲ್ಲವ ಬ್ರಿಗೇಡ್ ನ ಸದಾನಂದ ಪೂಜಾರಿ ,ಅವಿನಾಶ್ ಸುವರ್ಣ, ಕಿಶನ್ ಅಮೀನ್, ದೀಪಕ್ ಪೂಜಾರಿ, ಪ್ರಶಾಂತ್ ಪೂಜಾರಿ, ದೀಪಕ್ ಅಡು ಮರೋಲಿ, ಸುಧಾಕರ್ ಪಾಲನ್ ಅವರ ಉಪಸ್ಥಿತಿಯಲ್ಲಿ ನಡೆಯಿತು.