ಪರಶುರಾಮನ ನಕಲಿ ಪ್ರತಿಮೆ ಸ್ಥಾಪನೆ ಪ್ರಕರಣ-ಶಾಸಕ ಸುನೀಲ್ ಕುಮಾರ್, ಅಧಿಕಾರಿಗಳನ್ನು ಅಮಾನತುಗೊಳಿಸಲು ಮಿಥುನ್ ರೈ ಆಗ್ರಹ

ಮಂಗಳೂರು: ಕಾರ್ಕಳದ ಬೈಲೂರಿನಲ್ಲಿ ಗೋಮಾಳಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಅನಧಿಕೃತವಾಗಿ ಪರಶುರಾಮ ಥೀಮ್ ಪಾರ್ಕ್ ಮತ್ತು ನಕಲಿ ಪರಶುರಾಮ ಮೂರ್ತಿಯನ್ನು ಸ್ಥಾಪಿಸಿದ ವಿಚಾರಕ್ಕೆ ಸಂಬಂಧಿಸಿ ಶಾಸಕ ಸುನೀಲ್ ಕುಮಾರ್ ಅವರನ್ನು ಶಾಸಕ ಸ್ಥಾನದಿಂದ ತಕ್ಷಣ ಅಮಾನತು ಮಾಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹಿಸಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ನ.7ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರಶುರಾಮ ಥೀಮ್ ಪಾರ್ಕ್ ಮತ್ತು ನಕಲಿ ಪ್ರತಿಮೆ ಸ್ಥಾಪನೆಯ ಅವ್ಯವಹಾರದಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಚಿರಂಜೀವಿ ಪರಶುರಾಮನ ನೈಜ ಮೂರ್ತಿ ನಿರ್ಮಾಣ ಮಾಡಬೇಕು. ಅದು ಥೀಮ್ ಪಾರ್ಕ್‌ನಲ್ಲೇ ಆಗಬಹುದು ಅಥವಾ ಅವಿಭಜಿತ ಜಿಲ್ಲೆಯ ಎಲ್ಲಿಯಾದರೂ ಪರಶುರಾಮನ ಉತ್ತಮ ಮೂರ್ತಿ ನಿರ್ಮಾಣವಾಗಲಿ ಎಂದರು. ಪರಶುರಾಮನ ಮೂರ್ತಿ ನಿರ್ಮಾಣದಲ್ಲಿ ಆಗಿರುವ ಅನ್ಯಾಯ, ಅವ್ಯವಹಾರದ ವಿರುದ್ಧ ಧ್ವನಿ ಎತ್ತದೆ ಇದ್ದರೆ ಖಂಡಿತ ಪರಶುರಾಮನ ಶಾಪ ತಟ್ಟಬಹುದು ಎಂದು ಎಚ್ಚರಿಸಿದರು. ಪರಶುರಾಮನ ಮೂರ್ತಿ ನಿರ್ಮಾಣದಲ್ಲಿ ಆಗಿರುವ ಅನ್ಯಾಯದ ವಿರುದ್ಧ, ಧರ್ಮವನ್ನು ರಕ್ಷಿಸಲು, ಅಧರ್ಮದ ವಿರುದ್ಧ ಓರ್ವ ನೈಜ ಹಿಂದುವಾಗಿ ಹೋರಾಡಲು ತಾನು ಎಲ್ಲಾ ಸ್ವಾಮೀಜಿಗಳನ್ನು, ಮಠಾಧೀಶರನ್ನು ಭೇಟಿಯಾಗಿ ಅವರ ಆರ್ಶಿರ್ವಾದ ಮತ್ತು ಬೆಂಬಲ ಪಡೆಯುವ ಅಭಿಯಾನವನ್ನು ನ.10ನೇ ಶುಕ್ರವಾರದಿಂದ ಆರಂಭಿಸುವುದಾಗಿ ಮಿಥುನ್ ರೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಪುರಸಭಾ ಸದಸ್ಯ ಶುಭೋದ್ ರಾವ್, ಕಾಂಗ್ರೆಸ್ ಪ್ರಮುಖರಾದ ಪ್ರವೀಣ್ ಚಂದ್ರ ಆಳ್ವ, ಎಸಿ ವಿನಯರಾಜ್, ಅನಿಲ್ ಪೂಜಾರಿ, ಪ್ರಕಾಶ್ ಸಾಲಿಯಾನ್, ಮೋಹನ್ ಕೋಟಿಯನ್, ವಿಶ್ವಾಸ್‌ ದಾಸ್, ಅಪ್ಪಿ, ವಿಕಾಸ್ ಶೆಟ್ಟಿ, ದುರ್ಗಾ ಪ್ರಸಾದ್, ಶಾಂತಲಾ ಗಟ್ಟಿ, ರಾಕೇಶ್ ದೇವಾಡಿಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here