ಮಹಿಳೆಯರೊಂದಿಗೆ ಅಸಭ್ಯ ವರ್ತನೆ, ಕಲ್ಲು ತೂರಾಟ-ಸಾರ್ವಜನಿಕರಿಂದ ಗೂಸ

ಮಂಗಳೂರು: ಮಂಗಳೂರು ನಗರದ ಹೊರ ವಲಯದ ಬೋಂದೆಲ್ ಚರ್ಚ್ ಬಳಿ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರ ಬಳಿ ಅಸಭ್ಯ ರೀತಿಯಲ್ಲಿ ವರ್ತಿಸಿ, ಮನಬಂದಂತೆ ಕಲ್ಲೆಸೆಯುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ಆತನ ಕೈ ಕಾಲು‌ ಕಟ್ಟಿಹಾಕಿ ಥಳಿಸಿದ ಘಟನೆ ನ.8ರಂದು ಸಂಜೆ ನಡೆದಿದೆ.

 

ಸುಮಾರು 50 ವರ್ಷದ ವ್ಯಕ್ತಿ ತನ್ನನ್ನು ಸುಭಾಷ್ ಎಂದು ಹೇಳಿಕೊಂಡಿದ್ದು ಬಿಜಾಪುರ ಮೂಲದವನೆಂದು ಗುರುತಿಸಿಕೊಂಡಿದ್ದಾನೆ. ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ಈತ ಯಾರ ಮಾತನ್ನು ಕೇಳದೆ ಮನಬಂದಂತೆ ವರ್ತಿಸುತ್ತಿದ್ದ ಈತನನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕಾವೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ಸುಭಾಷ್‌ ನನ್ನು 108 ಆ್ಯಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

LEAVE A REPLY

Please enter your comment!
Please enter your name here