ಮಂಗಳೂರು(ಸುಳ್ಯ): ಐಸ್ ಕ್ರೀಂ ಉದ್ಯಮಿ ಸೊಸೆ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳಿಗೆ ಬೆಂಗಳೂರಿನ ಸಿಟಿ ಏಳನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಐಶ್ವರ್ಯಾ ಮಾವ ಗಿರಿಯರಪ್ಪ ಗೌಡ ಕಾಪಿಲ, ಅತ್ತೆ ಸೀತಮ್ಮ, ಗಂಡ ರಾಜೇಶ್, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಯ್ ಅವರನ್ನು ಕೆಲವು ದಿನಗಳ ಹಿಂದೆ ಪೊಲೀಸರು ಗೋವಾದಲ್ಲಿ ಬಂಧಿಸಿದ್ದರು. ಇನ್ನುಳಿದ ಆರೋಪಿಗಳಾದ ಐಶ್ವರ್ಯ ತಂದೆಯ ಅಕ್ಕ ಗೀತಾ, ಅವರ ಪತಿ ರವೀಂದ್ರನಾಥ ಕೇವಳ ಹಾಗೂ ಅವರ ಪುತ್ರಿ ಲಿಪಿ ಅವರು ತಲೆಮರೆಸಿಕೊಂಡಿದ್ದರು. ಇದೀಗ ಅವರಿಗೆ ನಿರೀಕ್ಷಣಾ ಜಾಮೀನು ಲಭಿಸಿದೆ. ಆರೋಪಿಗಳ ಪರವಾಗಿ ನ್ಯಾಯವಾದಿ ರಾಜೇಶ್ ಕೆ.ಎಸ್.ಎನ್. ವಾದಿಸಿದ್ದರು.