ಮಡಿಕೇರಿ: ವಿರಾಜಪೇಟೆ ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿಯ ಕರಡ ಗ್ರಾಮದ ಕೀಮಲೆ ಕಾಡುವಿನಲ್ಲಿ ಕಾಡಾನೆಯೊಂದು ನ.13ರ ತಡರಾತ್ರಿ ಮನೆಯೊಂದರ ಆವರಣದಲ್ಲಿ ಮರಿ ಹಾಕಿದೆ. ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ಬಂದು ವೀಕ್ಷಿಸಲಾರಂಭಿಸಿದ್ದಾರೆ. ಇದರಿಂದ ವಿಚಲಿತವಾದ ಕಾಡಾನೆ ಮರಿಯಾನೆಯನ್ನು ಬಿಟ್ಟು ತೆರಳಿದೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯು ಮರಿಯಾನೆಯೊಂದಿಗೆ ಕಾಡಾನೆಯನ್ನು ಹುಡುಕುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಆರ್‌ಎಫ್‌ಒ ದೇವಯ್ಯ, ಹೆಚ್ಚು ಜನ ಸೇರಿದ್ದರಿಂದ ತಾಯಿ ಆನೆ ಸ್ಥಳದಿಂದ ಹೊರಟು ಹೋಗಿದೆ, ಕಾಫಿತೋಟ ತೀರಾ ಇಳಿಜಾರಿನಲ್ಲಿದ್ದು, ಮರಿಯಾನೆಯೊಂದಿಗೆ ತಾಯಿ ಆನೆಯನ್ನು ಹುಡುಕುತ್ತಿದ್ದೇವೆ. ತಾಯಿ ಆನೆ ಜತೆ ಮರಿಯಾನೆಯನ್ನು ಸೇರಿಸಬೇಕಿದೆ ಎಂದು ಹೇಳಿದ್ದಾರೆ.