ತಡೆಗೋಡೆ ಕಾಮಗಾರಿ ವೇಳೆ ಚಿನ್ನವನ್ನು ಹೋಲುವ ಪುರಾತನ ಆಭರಣ ಪತ್ತೆ

ಮಂಗಳೂರು (ಸಿದ್ದಾಪುರ): ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ‌ ಆನಂದಪುರದಲ್ಲಿ ಈಶ್ವರ ದೇವಾಲಯದ ಕಾಮಗಾರಿ ನಡೆಯುತ್ತಿದ್ದ ವೇಳೆ ಚಿನ್ನಾಭರಣವನ್ನು ಹೋಲುವ ವಸ್ತುಗಳು ಪತ್ತೆಯಾಗಿವೆ.


ಆನಂದಪುರದ ಟಾಟಾ ಸಂಸ್ಥೆಯ ಈಶ್ವರ ದೇವಾಲಯದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಕಾರ್ಮಿಕರಾದ ಸುಬ್ರಮಣಿ ಹಾಗೂ ಇತರರು ಕೆಲಸ ಮಾಡುತ್ತಿದ್ದರು. ಈ ವೇಳೆ ಮಣ್ಣಿನ ಅಡಿಯಲ್ಲಿ ಎರಡು ಡಬ್ಬಗಳು ಪತ್ತೆಯಾಗಿವೆ. ಕಾರ್ಮಿಕರು ಕೂಡಲೇ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ವ್ಯವಸ್ಥಾಪಕರಿಂದ ಮಾಹಿತಿ ಪಡೆದ ಸಿದ್ದಾಪುರ ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಸ್ತುಗಳ ಪರಿಶೀಲನೆ ನಡೆಸಿದ್ದಾರೆ.

ಎರಡು ಡಬ್ಬಗಳಲ್ಲಿ ಚಿನ್ನದಂತೆ ಕಾಣುವ ಅಂದಾಜು 900 ಗ್ರಾಂ ತೂಕದ ಆಭರಣಗಳು ಪತ್ತೆಯಾಗಿದ್ದು, ಕಂದಾಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ದೊರೆತಿರುವ ಆಭರಣಗಳು ಚಿನ್ನ ಎಂಬುದು ಸ್ಪಷ್ಟವಾಗಿಲ್ಲ. ಪುರಾತತ್ವ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗೆ ಕಛೇರಿಗೆ ತಲುಪಿಸಲಾಗುವುದು ಎಂದು ತಾಲೂಕು ಉಪತಹಶೀಲ್ದಾರ್ ಪ್ರದೀಪ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here