ಮಂಗಳೂರು(ಶಬರಿಮಲೆ): ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ನ.17ರಂದು ತೆರೆದಿದ್ದು, ಅಪಾರ ಸಂಖ್ಯೆಯ ಭಕ್ತಸಾಗರವೇ ದೇಗಲುದತ್ತ ಹರಿದುಬಂದಿದೆ.
ಶುಕ್ರವಾರ ಬೆಳಗಿನ ಜಾವ 3ಕ್ಕೆ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿದೆ. ದೇವಾಲಯದ ಮುಖ್ಯ ಅರ್ಚಕ ತಂತ್ರಿ ಮಹೇಶ್ ಗರ್ಭಗುಡಿಯ ಬಾಗಿಲುಗಳನ್ನು ತೆರೆದಿದ್ದು ಮುಂದಿನ ಎರಡು ತಿಂಗಳ ಅವಧಿಗೆ ಭಕ್ತರಿಗಾಗಿ ಬಾಗಿಲು ತೆರೆದಿರಲಿದೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಭಕ್ತರು ತಂಡೋಪತಂಡವಾಗಿ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ.
ದೇವಾಲಯದ ಬಾಗಿಲು ತೆರೆಯುವ ಸಂದರ್ಭದಲ್ಲಿ ಕೇರಳದ ದೇವಸಂ ಸಚಿವ ಕೆ.ರಾಧಾಕೃಷ್ಣನ್, ಶಾಸಕರಾದ ಪ್ರಮೋದ್ ನಾರಾಯಣ್ ಹಾಗೂ ಕೆ.ಯು.ಜಿನೀಶ್ ಕುಮಾರ್ ಉಪಸ್ಥತರಿದ್ದರು. ತಿರುವಾಂಕೂರು ದೇವಸ್ಥಾನಂ ಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಎಸ್.ಪ್ರಶಾಂತ್ ಹಾಜರಿದ್ದು, ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ಉಚಿತ ಪ್ರಸಾದ ವಿತರಣಾ ಕಾರ್ಯಕ್ಕೆ ಸಚಿವ ರಾಧಾಕೃಷ್ಣನ್ ಚಾಲನೆ ನೀಡಿದರು.