ಪ್ರಿಯಕರನ ಮೊಬೈಲ್‌ನಲ್ಲಿ 13 ಸಾವಿರ ಯುವತಿಯರ ನಗ್ನ ಫೋಟೋ – ಬೆಂಗಳೂರು ಕೇಂದ್ರ ವಿಭಾಗದ ಸೆನ್‌ ಠಾಣೆಗೆ ದೂರು

ಮಂಗಳೂರು (ಬೆಂಗಳೂರು): ಪ್ರಿಯಕರನ ಮೊಬೈಲ್‌ನಲ್ಲಿ 13 ಸಾವಿರ ಯುವತಿಯರ ನಗ್ನ ಫೋಟೋಗಳನ್ನು ಕಂಡ ಪ್ರೇಯಸಿಯೊಬ್ಬಳು ಶಾಕ್‌ ಆಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 22 ವರ್ಷದ ಯುವತಿ, ತನ್ನ ಸಹೋದ್ಯೋಗಿ ಯುವಕನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರು ಆಗಾಗ್ಗೆ ಒಂದಾಗಿ ಖಾಸಗಿ ಕ್ಷಣಗಳನ್ನು ಕಳೆದಿದ್ದಾರೆ.
ಅದನ್ನು ಪ್ರಿಯಕರ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದ. ಅದನ್ನು ಗಮನಿಸಿದ್ದ ಯುವತಿ, ಆತ ಶೌಚಾಲಯಕ್ಕೆ ಹೋದಾಗ ಆತನ ಮೊಬೈಲ್‌ ತೆಗೆದುಕೊಂಡು ಡಿಲೀಟ್‌ ಮಾಡಲು ಮುಂದಾಗಿದ್ದಾಳೆ.

ಆಗ ಆತನ ಮೊಬೈಲ್‌ ನಲ್ಲಿ ಬರೋಬ್ಬರಿ 13 ಸಾವಿರ ಯುವತಿಯ ನಗ್ನ ಫೋಟೋಗಳು, ವಿಡಿಯೋ ಗಳು ಕಂಡು ಬೆಚ್ಚಿ ಬಿದ್ದಿದ್ದಾಳೆ. ವಿಪರ್ಯಾಸವೆಂದರೆ ಈ ಪೈಕಿ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಹಲವು ಯುವತಿಯ ಚಿತ್ರಗಳು ಇದರಲ್ಲಿ ಸೇರಿದ್ದು ಇದನ್ನು ಕಂಡ ಯುವತಿ ಶಾಕ್‌ ಆಗಿದ್ದಾಳೆ.

ಈ ವಿಚಾರ ಸಂಬಂಧ ಪ್ರಿಯಕರನ ಜತೆ ಜಗಳವಾಡಿ ಆತನಿಂದ ದೂರವಾಗಿದ್ದಾಳೆ. ಬಳಿಕ ತನ್ನ ಕಚೇರಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಅಧಿಕಾರಿ ಕಚೇರಿಯಲ್ಲಿ ಪರಿಶೀಲಿಸಿದಾಗ ಆತ ಯಾವ ಯುವತಿಗೂ ತೊಂದರೆ ಕೊಟ್ಟಿಲ್ಲ ಎಂದು ತಿಳಿದು ಬಂದರೂ ಅವರ ಫೋಟೋಗಳನ್ನು ಹೇಗೆ ಸಂಗ್ರಹಿಸಿದ್ದಾನೆ? ಅಥವಾ ಮೊರ್ಫ್ ಮಾಡಿರಬಹುದೇ ಎಂಬ ಅನುಮಾನದಿಂದ ನ.23ರಂದು ಕೇಂದ್ರ ವಿಭಾಗದ ಸೆನ್‌ ಠಾಣೆಗೆ ದೂರು ನೀಡಿದ್ದಾರೆ. ‌ಈ ಯುವಕ ಮಂಗಳೂರು ಮೂಲದವನೆಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here