ಮಂಗಳೂರು(ಢಾಕಾ): ಡಿ.2ರಂದು ದಕ್ಷಿಣ ಬಾಂಗ್ಲಾದೇಶದಲ್ಲಿ 5.8 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಜರ್ಮನ್ ಭೂಗೋಳ ವಿಜ್ಞಾನಗಳ ಸಂಶೋಧನಾ ಕೇಂದ್ರವನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭೂಕಂಪದ ಕೇಂದ್ರ ಬಿಂದುವು ಚಿತ್ತಗಾಂಗ್ ವಲಯದ ರಾಮ್ ಗಂಜ್ ನಿಂದ ಎಂಟು ಕಿಮೀ ದೂರದಲ್ಲಿತ್ತು ಎಂದು ವರದಿಯಾಗಿದೆ. ತಕ್ಷಣಕ್ಕೆ ಯಾವುದೇ ಹಾನಿ ಕುರಿತು ವರದಿಯಾಗಿಲ್ಲ. ರಾಜ್ ಶಾಹಿ, ಸೈಲ್ಹೆಟ್, ರಂಗ್ ಪುರ್, ಚೌಡಂಗ, ನೌಖಾಲಿ ಹಾಗೂ ಕುಷ್ಟಿಯ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಈ ಭೂಕಂಪನದ ತೀವ್ರತೆಯು 5.6ರಷ್ಟಿತ್ತು ಎಂದು ಭಾರತದ ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರವು ಹೇಳಿದೆ.