ಮಂಗಳೂರು: ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ಫ್ಯಾಕ್ಟ್-ಚೆಕ್ ಯುನಿಟ್ 9 ಯೂಟ್ಯೂಬ್ ಚಾನೆಲ್‌ಗಳು ಹರಡಿರುವ ಸುಳ್ಳು ಮಾಹಿತಿಯನ್ನು ಬಯಲು ಮಾಡಿದೆ.
ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಯೂಟ್ಯೂಬ್ ಚಾನೆಲ್‌ಗಳು 83 ಲಕ್ಷ ಚಂದಾದಾರರನ್ನು ಹೊಂದಿವೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಚಾನೆಲ್‌ಗಳು ಭಾರತದ ಮುಖ್ಯ ನ್ಯಾಯಮೂರ್ತಿ, ಪ್ರಧಾನ ಮಂತ್ರಿ ಮತ್ತು ಮುಖ್ಯ ಚುನಾವಣಾ ಆಯುಕ್ತರು ಸೇರಿದಂತೆ ಸಾಂವಿಧಾನಿಕ ಹುದ್ದೆಗಳಲ್ಲಿರುವ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂಗಳು) ನಿಷೇಧಿಸಲಾಗಿದೆ ಮತ್ತು ಕೇಂದ್ರ ಸಚಿವರ ರಾಜೀನಾಮೆ ಅಥವಾ ಸಾವಿನ ಬಗ್ಗೆ ಕೆಲವು ಚಾನೆಲ್‌ಗಳು ತಪ್ಪಾಗಿ ಹೇಳಿಕೊಂಡಿವೆ ಎಂದು ಫ್ಯಾಕ್ಟ್-ಚೆಕ್ ಯುನಿಟ್ ಹೇಳಿಕೊಂಡಿದೆ.
ಸುಳ್ಳು ಸುದ್ದಿ ಹರಡುತ್ತಿದೆ ಎಂದು ಪಟ್ಟಿ ಮಾಡಲಾದ ಯುಟ್ಯೂಬ್ ಚಾನಲ್‌ಗಳು:
ಬಜರಂಗ್ ಎಜುಕೇಶನ್ (24.3 ಲಕ್ಷ ಚಂದಾದಾರರನ್ನು ಹೊಂದಿದೆ)
ಆಪ್ಕೆ ಗುರೂಜಿ (34.7 ಲಕ್ಷ ಚಂದಾದಾರರನ್ನು ಹೊಂದಿದೆ)
ಬಿಜೆ ನ್ಯೂಸ್ (5.29 ಲಕ್ಷ ಚಂದಾದಾರರನ್ನು ಹೊಂದಿದೆ)
ಸಂಸಾನಿ ಲೈವ್ ಟಿವಿ (4.33 ಲಕ್ಷ ಚಂದಾದಾರರನ್ನು ಹೊಂದಿದೆ)
ಜಿವಿಟಿ ನ್ಯೂಸ್ (8.16 ಲಕ್ಷ ಚಂದಾದಾರರನ್ನು ಹೊಂದಿದೆ)
ಡೈಲಿ ಸ್ಟಡಿ (3.35 ಲಕ್ಷ ಚಂದಾದಾರನ್ನು ಹೊಂದಿದೆ)
ಭಾರತ್ ಏಕ್ತಾ ನ್ಯೂಸ್ (11,700 ಚಂದಾದಾರರನ್ನು ಹೊಂದಿದೆ)
ಅಬ್ ಬೋಲೆಗಾ ಭಾರತ್ (1.78 ಲಕ್ಷ ಚಂದಾದಾರರನ್ನು ಹೊಂದಿದೆ)
ಸರ್ಕಾರಿ ಯೋಜನೆ ಅಧಿಕೃತ (1 ಲಕ್ಷ ಚಂದಾದಾರನ್ನು ಹೊಂದಿದೆ).