ರೆಸಾರ್ಟ್‍ನಲ್ಲಿ ಮಗು ಸೇರಿ ಮೂವರ ಮೃತದೇಹ ಪತ್ತೆ-ಹಾಸಿಗೆಯಲ್ಲಿ ಮಗುವಿನ ದೇಹ, ನೇಣು ಬಿಗದ ಸ್ಥಿತಿಯಲ್ಲಿ ಪತಿ ಪತ್ನಿ ದೇಹ ಪತ್ತೆ

ಮಂಗಳೂರು(ಮಡಿಕೇರಿ): ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ರೆಸಾರ್ಟ್‍ವೊಂದರಲ್ಲಿ ಮಗು ಸೇರಿ ಮೂವರ ಮೃತದೇಹ ಪತ್ತೆಯಾಗಿದೆ.

ರೆಸಾರ್ಟ್‍ನ ಕೋಣೆಯಲ್ಲಿ ಪತಿ, ಪತ್ನಿಯ ಮೃತದೇಹ ನೇಣು ಬಿಗದ ಸ್ಥಿತಿಯಲ್ಲಿದ್ದು, ಮಗುವಿನ ಮೃತದೇಹ ಹಾಸಿಗೆಯಲ್ಲಿ ಪತ್ತೆಯಾಗಿದೆ. ಕೇರಳ ರಾಜ್ಯದ ಕೊಟ್ಟಾಯಂ ಬಳಿಯ ಪಡಿಚಾಟು ಗ್ರಾಮದ ವಿನೋದ್ (37) ಹಾಗೂ ಅವರ ಪತ್ನಿ, ಮಗು ಮೃತಪಟ್ಟವರು. ಮಗುವನ್ನು ಕೊಂದು ದಂಪತಿ ನೇಣಿಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಡಿ.8ರ ಶುಕ್ರವಾರ ಸಂಜೆ ಪ್ರವಾಸಕ್ಕೆಂದು ಕೊಡಗಿಗೆ ಬಂದವರು ರೆಸಾರ್ಟ್‍ನಲ್ಲಿ ತಂಗಿದ್ದರು ಎಂದು ಹೇಳಲಾಗಿದೆ. ಕೇರಳದಿಂದ ಕುಟುಂಬದ ಸದಸ್ಯರು ಬಂದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿಯಲಿದೆ. ಸ್ಥಳಕ್ಕೆ ಮಡಿಕೇರಿ ಗಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here