ಸೌದಿ ಅರೇಬಿಯಾದಲ್ಲಿ 17ನೇ ವಿಶ್ವ ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನ-ಪೂರ್ವಭಾವಿ ಸಭೆ-ಸ್ವಾಗತ ಸಮಿತಿ ರಚನೆ

ಮಂಗಳೂರು(ಸೌದಿ ಅರೇಬಿಯಾ): ಸೌದಿ ಅರೇಬಿಯಾದಲ್ಲಿ ಪ್ರಪಥಮ ಬಾರಿಗೆ ಅದ್ಧೂರಿಯಾಗಿ 17ನೇ ವಿಶ್ವ ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನ ನಡೆಸುವ ಕುರಿತು ಪೂರ್ವಬಾವಿ ಸಭೆಯು ಜುಬೈಲ್ ನ ಕ್ಲಾಸಿಕ್ ಹೋಟೆಲ್‌ ನ ಸಭಾಂಗಣದಲ್ಲಿ ನಡೆಯಿತು.

ಕನ್ನಡ ಸಾಹಿತ್ಯ ಸಂಸ್ಕೃತಿ ಸಮ್ಮೇಳನವು ಜನವರಿ ತಿಂಗಳ 18- 19 ರಂದು ನಡೆಯಲಿದ್ದು, ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.  ಅನಿವಾಸಿ ಕನ್ನಡಿಗರು ಹಾಗೂ ಹೃದಯ ವಾಹಿನಿ ಸಂಸ್ಥೆಯು ಪ್ರಸ್ತುತ ಪಡಿಸುವ 17ನೇ ವಿಶ್ವಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ನಾಡುನುಡಿ , ಇತಿಹಾಸ , ಕಲೆ, ಸಂಸ್ಕೃತಿಯನ್ನು ಅನಾವರಣಗೊಳಿಸಿ ಕನ್ನಡದ ಕಂಪನ್ನು ಅರಬ್ ನೆಲದಲ್ಲಿ ಪಸರಿಸುವ ಕಾರ್ಯವನ್ನು ಮಾಡಲಿದೆ.

ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಝಕಾರಿಯ ಬಜ್ಪೆ ಹಾಗೂ ಶೇಕ್ ಕರ್ನಿರೆ ಅವರ ಗೌರವ ಉಪಸ್ಥಿತಿಯಲ್ಲಿ ಸತೀಶ್ ಕುಮಾರ್ ಬಜಾಲ್ ಅವರನ್ನು ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಇಬ್ರಾಹಿಂ ಹುಸೈನ್ ಪಡುಬಿದ್ರಿ ಮತ್ತು ಸಂತೋಷ್‌ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಸೂರಿಂಜೆ, ಕಾರ್ಯದರ್ಶಿಯಾಗಿ ಪ್ರವೀಣ್ ಪೀಟರ್ ಅರನ್ಹ ಹಾಗೂ ಫಿರೋಜ್ ಕಲ್ಲಡ್ಕ, ಜಂಟಿ ಕಾರ್ಯದರ್ಶಿಯಾಗಿ ಮೊಹಮ್ಮದ್ ಕೃಷ್ಣಾಪುರ, ಮೊಹಮ್ಮದ್ ಮಲೆಬೆಟ್ಟು ಮತ್ತು ಗೋಪಾಲ ಶೆಟ್ಟಿ ಆಯ್ಕೆಯಾಗಿದ್ದು, ಕೋಶಾಧಿಕಾರಿಗಳಾಗಿ ಮೊಹಮ್ಮದ್ ಅಲಿ ಉಪ್ಪಿನಂಗಡಿ, ಜಂಟಿ ಕೋಶಾಧಿಕರಿಯಾಗಿ ನಿತಿನ್ ರಾವ್ ಪಡುಬಿದ್ರಿ, ದಾವೂದ್ ರಿಯಾದ್ ಅವರನ್ನು ಆಯ್ಕೆ ಮಾಡಲಾಗಿದೆ.

ಮೊಹಮ್ಮದ್ ನೋಮನ್ ಮುಖ್ಯ ಸಂಯೋಜಕರಾಗಿ ಮತ್ತು ಮೊಹಮ್ಮದ್ ಫಯಾಜ್, ಮೊಹಮ್ಮದ್ ಆಯಾಜ್, ಇಸ್ಮಾಯಿಲ್ ಕಾಟಿಪಳ್ಳ , ಯಶಸ್ ಚಂದ್ರಶೇಖರ, ಅಶ್ರಫ್ ನೌಶಾದ್ ಪೊಳ್ಯ , ಪ್ರಸನ್ನ ಭಟ್ ಅವರನ್ನು ಸಂಯೋಜಕರಾಗಿ ಆಯ್ಕೆ ಮಾಡಲಾಗಿದ್ದು,ರಾಜಕುಮಾರ ಬಹ್ರೈನ್ , ಶಾಹುಲ್ ಹಮೀದ್, ಸ್ಟ್ಯಾನಿ ಮಥಾಯಸ್, ನರೇಂದ್ರ ಶೆಟ್ಟಿ, ಅಬ್ದುಲ್ ಹಮೀದ್, ಸೈಯದ್ ಬಾವ ಬಜ್ಪೆ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಸೌದಿ ಅರೇಬಿಯಾದಲ್ಲಿ ನಡೆಯುವ ಈ ಸಮ್ಮೇಳನವನ್ನು ಎಲ್ಲಾ ಕನ್ನಡಾಭಿಮಾನಿಗಳು ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಸೇರಿ ಅವಿಸ್ಮರಣೀಯವಾಗಿಸಲು ಎಲ್ಲಾ ರೀತಿಯ ನೆರವು , ಸಹಕಾರ ನೀಡುವಂತೆ ಸಭಾದಕ್ಷತೆಯನ್ನು ವಹಿಸಿದ್ದ ಝಕಾರಿಯ ಬಜ್ಪೆ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಮನವಿ ಮಾಡಿದ್ದು ಕಾರ್ಯಕ್ರಮದ ರೂಪುರೇಷಗಳ ಬಗ್ಗೆ ಸಂಪೂರ್ಣ ವಿವರಣೆಯನ್ನು ಸಭೆಗೆ ನೀಡಿದರು.ಇಕ್ಬಾಲ್ ಮಲ್ಲೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರಫೀಕ್ ಸೂರಿಂಜೆ ವಂದಿಸಿದರು.

LEAVE A REPLY

Please enter your comment!
Please enter your name here