ಕೆಎಂಎಫ್‌ನಿಂದ ನೂತನ ಉತ್ಪನ್ನ-ನಂದಿನಿ ಲೈಟ್ ಮೊಸರು ಮತ್ತು ಎಮ್ಮೆ ಹಾಲು ಮಾರುಕಟ್ಟೆಗೆ

ಮಂಗಳೂರು(ಬೆಂಗಳೂರು): ರಾಜ್ಯದ ಪ್ರತಿಷ್ಠಿತ ಸಂಸ್ಥೆ ಕೆಎಂಎಫ್‌ ನ ನಂದಿನಿ ಉತ್ಪನ್ನಗಳ ಜತೆಗೆ ಹೊಸದಾಗಿ ನಂದಿನಿ ಎಮ್ಮೆ ಹಾಲು ಮತ್ತು ಹೊಸ ನಂದಿನಿ ಲೈಟ್ ಮೊಸರು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ನಂದಿನಿ ಲೈಟ್ ಮೊಸರಿನಲ್ಲಿ ಕಡಿಮೆ ಜಿಡ್ಡಿನಂಶ ಅಧಿಕ ಪ್ರೋಟಿನ್, ಅತಿಹೆಚ್ಚು ಪೋಷಕಾಂಶವನ್ನು ಒಳಗೊಂಡಿದ್ದು, ಹೊಸ ನಂದಿನಿ ಲೈಟ್ ಮೊಸರು 180 ಮಿ.ಲೀ ಪ್ಯಾಕ್ ರೂ.10ಕ್ಕೆ ಲಭ್ಯವಾಗಲಿದೆ.

ನಂದಿನಿ ಎಮ್ಮೆ ಹಾಲಿನ ಪ್ಯಾಕನ್ನು ಫ್ರಿಡ್ಜ್‌ ನಲ್ಲಿ ಇಡುವ ಅಗತ್ಯ ಇರುವುದಿಲ್ಲ. ವಾತಾವರಣದ ತಾಪಮಾನದಲ್ಲೇ ಇಡಬಹುದಾಗಿದೆ. ಫ್ಲೆಕ್ಸಿ ಪ್ಯಾಕಿಂಗ್‌ನಿಂದ ಈ ಎಮ್ಮೆ ಹಾಲನ್ನು ಸಂಸ್ಕರಿಸಲಾಗಿದೆ. ಮೂರು ತಿಂಗಳವರೆಗೆ ಕೆಡದಿರುವಂಥ ಯುಎಚ್‌ಟಿ ತಂತ್ರಜ್ಞಾನದಲ್ಲಿ ಪ್ಯಾಕ್ ಮಾಡಲಾಗಿದೆ. ಕಚ್ಚಾ ಹಾಲಿನ ಪ್ರತಿ ಕಣವನ್ನೂ ನಿಗದಿತ ತಾಪಮಾನದಲ್ಲಿ 4 ಸೆಕೆಂಡ್‌ವರೆಗೆ ಕಾಯಿಸಿ ಹಾಗೂ ವಾತಾವರಣದ ತಾಪಮಾನಕ್ಕೆ ತಂಪುಗೊಳಿಸಿ 5 ಪದರಗಳುಳ್ಳ ವಿಶೇಷ ಪ್ಲಾಸ್ಟಿಕ್ ಪ್ಯಾಕೆಟ್‌ ನಲ್ಲಿ ಜೀವಾಣುರಹಿತ ವ್ಯವಸ್ಥೆಯಲ್ಲಿ ಹಾಲನ್ನು ಪ್ಯಾಕ್ ಮಾಡಲಾಗಿದೆ. ಲೀಟರ್‌ಗೆ 60 ರೂಪಾಯಿ ನಿಗದಿಪಡಿಸಲಾಗಿದ್ದು, ಹಾಲು ಒಕ್ಕೂಟಗಳಿಗೆ ಪ್ರತಿ ನಿತ್ಯ 60 ಸಾವಿರ ಲೀಟರ್ ಎಮ್ಮೆ ಹಾಲು ಪೂರೈಕೆಯಾಗುತ್ತಿದೆ. ಈ ಹಿಂದೆ ಕೆಎಂಎಫ್‌ ಎಮ್ಮೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತಾದರೂ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು. ಬೆಂಗಳೂರಿನ ಜತೆಗೆ ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರದ ಮಾರುಕಟ್ಟೆಯಲ್ಲಿ ಎಮ್ಮೆ ಹಾಲನ್ನು ಮಾರಾಟ ಮಾಡಲು ಕೆಎಂಎಫ್‌ ಉದ್ದೇಶಿಸಿದೆ.

LEAVE A REPLY

Please enter your comment!
Please enter your name here