ಕಾಮವಾಂಛೆ ಕುರುಡು – ಪ್ರೇಮಪಾಠ ಮಾಡಿದ ಶಿಕ್ಷಕಿ ವಿದ್ಯಾರ್ಥಿ ಜೊತೆ ಎಸ್ಕೇಪ್-ಪೋಕ್ಸೋ ಕಾಯ್ದೆಯಡಿ ಸೇರಿದರು ಲಾಕಪ್

ಮಂಗಳೂರು(ತಮಿಳುನಾಡು): ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯನ್ನು ಪುಸಲಾಯಿಸಿ ಆತನೊಂದಿಗೆ ಎಸ್ಕೇಪ್​ ಆಗಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆರೋಪಿ ಶಿಕ್ಷಕಿಯ ವಿರುದ್ಧ ಪೊಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚೆನ್ನೈನ ಶೋಲಿಂಗನಲ್ಲೂರಿನಲ್ಲಿರುವ ಖಾಸಗಿ ಶಾಲೆಯ ಇಂಗ್ಲಿಷ್​ ಭಾಷಾ ಶಿಕ್ಷಕಿ ಮತ್ತು ಅದೇ ಶಾಲೆಯ ವಿದ್ಯಾರ್ಥಿ ಕೊಯಮತ್ತೂರಿಗೆ ಎಸ್ಕೇಪ್​ ಆಗಿದ್ದರು. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ಚೆನ್ನೈಗೆ ಕರೆತಂದಿದ್ದಾರೆ. ‌

ಕೆಲವು ವರ್ಷಗಳ ಹಿಂದೆ ಗಂಡನಿಂದ ಬೇರೆಯಾಗಿ ವಾಸವಿದ್ದ ಈ ಶಿಕ್ಷಕಿ, ಇತ್ತೀಚೆಗಷ್ಟೇ ತನ್ನ ಶಾಲೆಯ 17 ವರ್ಷದ ವಿದ್ಯಾರ್ಥಿಯ ಜತೆ ಸ್ನೇಹ ಬೆಳೆಸಿದ್ದಳು. ಇಬ್ಬರ ಸ್ನೇಹ ವಿವಾಹೇತರ ಸಂಬಂಧಕ್ಕೆ ತಿರುಗಿತ್ತು. ತನ್ನ ಕಾಮದಾಹವನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಯನ್ನು ಶಿಕ್ಷಕಿ ಪುಸಲಾಯಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಮಂಗಳವಾರ ವಿದ್ಯಾರ್ಥಿ, ಶಾಲೆಯಿಂದ ಮನೆ ಹಿಂತಿರುಗದಿದ್ದಾಗ ಆತಂಕಗೊಂಡ ಮನೆಯವರು ಶಾಲೆಯಲ್ಲಿ ಮಗನ ಬಗ್ಗೆ ವಿಚಾರಿಸಿದ್ದಾರೆ. ನಿಮ್ಮ ಮಗ ಇಂದು ಶಾಲೆಗೆ ಬಂದಿಲ್ಲ ಎಂಬ ಉತ್ತರ ಕೇಳಿ ದಿಗ್ಭ್ರಮೆಗೊಂಡ ಹೆತ್ತವರು ತಕ್ಷಣ ಚೆನ್ನೈನ ಥಾಲಂಬುರ್​ ಠಾಣೆಗೆ ತೆರಳಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ವಿದ್ಯಾರ್ಥಿ ಶಾಲೆಗೆ ಗೈರಾದ ಅದೇ ದಿನ ಶಿಕ್ಷಕಿ ಗೈರಾಗಿರುವುದು ಕಂಡುಬಂದಿದೆ. ಬಳಿಕ ಇಬ್ಬರ ಮೊಬೈಲ್​ ಟವರ್​ ಲೊಕೇಶನ್​ ಟ್ರ್ಯಾಕ್​ ಮಾಡಿದಾಗ ಕೊಯಮತ್ತೂರಿನ ಕರಮಡೈನಲ್ಲಿರುವುದು ತಿಳಿದುಬಂದಿದೆ. ಅಲ್ಲಿಗೆ ತೆರಳಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಚೆನ್ನೈಗೆ ವಾಪಸ್​ ಕರೆತಂದಿದ್ದಾರೆ. ಶಿಕ್ಷಕಿಯನ್ನು ವಿಚಾರಿಸಿದಾಗ ಪ್ರವಾಸ ಉದ್ದೇಶದಿಂದ ಕರಮಡೈಗೆ ಹೋಗಿದ್ದೆವು ಎಂದು ಹೇಳಿದ್ದಾಳೆ. ಸದ್ಯ ಆಕೆಯ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here