



ಮಂಗಳೂರು: ಕಾರುಗಳಲ್ಲಿ ಮಂಗಳೂರಿನ ವಿವಿಧ ಪ್ರದೇಶಗಳಿಗೆ ತೆರಳಿ ಜಾನುವಾರು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೈಕಂಬ ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್ ಪೋಸ್ಟ್ ನಲ್ಲಿ ಬಂಧಿಸಲಾಗಿದೆ.







ಬಂಧಿತರನ್ನು ಮೂಡುಬಿದಿರೆ ಪಡುಕೊಣಾಜೆ ಗ್ರಾಮದ ನೀರಳಿಕೆ ಹೌಸ್ ನಿವಾಸಿ ಇಮ್ರಾನ್ ಇಬ್ರಾಹಿಂ (24) ಮತ್ತು ಕಲ್ಲಬೆಟ್ಟು ಗ್ರಾಮದ ಗಂಟಲಕಟ್ಟೆ ನಿವಾಸಿ ನಾಸಿರ್ ಯಾನೆ ನಾಚಿ (26) ಎಂದು ಗುರುತಿಸಲಾಗಿದೆ. ಬಂಧಿತರಿಂದ ದನ ಕಳವು ಮಾಡಲು ಉಪಯೋಗಿಸುತ್ತಿದ್ದ ಸುಮಾರು 10 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಕಾರು, ರಿಟ್ಜ್ ಕಾರು ಹಾಗೂ ಇನ್ನಿತರೆ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಆರೋಪಿಗಳು ಬಜಪೆ ಠಾಣೆ ನಿರೀಕ್ಷಕರಾದ ಸಂದೀಪ್ ಅವರ ಆದೇಶದಂತೆ ಎಸ್ಐ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.















