ಪ್ರಸಿದ್ಧ ಬಟ್ಟೆ ಮಳಿಗೆಯಲ್ಲಿ ಮಿಸ್ ಫೈರ್ ಆಗಿ ಓರ್ವನಿಗೆ ಗಾಯ

ಮಂಗಳೂರು (ಉಡುಪಿ): ಉಡುಪಿಯ ಪ್ರಸಿದ್ಧ ಬಟ್ಟೆ‌ ಮಳಿಗೆಯಲ್ಲಿ ಫೈರಿಂಗ್ ಸಂಭವಿಸಿ ಓರ್ವನಿಗೆ ಗಾಯವಾಗಿದೆ.ಬನ್ನಂಜೆಯಲ್ಲಿರುವ ಜಯಲಕ್ಷ್ಮಿ ಬಟ್ಟೆ ಮಳಿಗೆಯಲ್ಲಿ ಈ ಘಟನೆ ಸಂಭವಿಸಿದ್ದು, ಮಳಿಗೆಯ ಒಳಗಿದ್ದ ಗನ್ ನ್ನು ಪರಿಶೀಲಿಸುವಾಗ ಮಿಸ್ ಫೈರ್ ಆಗಿ ಮಳಿಗೆ ಸಿಬ್ಬಂದಿಯೋರ್ವನಿಗೆ ಗುಂಡು ತಗುಲಿ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಉಡುಪಿ‌ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here