30 ವರ್ಷದ ಹಿಂದಿನ ಕೇಸನ್ನು ಓಪನ್ ಮಾಡುವ ಮೂಲಕ ಇಂಡಿಯಾ ಒಕ್ಕೂಟದವರು ದ್ವೇಷದ ಭಾವನೆಯನ್ನು ವಾಂತಿ ಮಾಡಲು ಶುರು ಮಾಡಿದ್ದಾರೆ-ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ವೈ ಭರತ್ ಶೆಟ್ಟಿ ಆಕ್ರೋಶ

ಮಂಗಳೂರು: 30 ವರ್ಷದ ಹಿಂದಿನ ಕೇಸನ್ನು ಈಗ ಓಪನ್ ಮಾಡುವ ಮೂಲಕ ಇಂಡಿಯಾ ಒಕ್ಕೂಟದವರು ದ್ವೇಷದ ಭಾವನೆಯನ್ನು ವಾಂತಿ ಮಾಡಲು ಶುರು ಮಾಡಿದ್ದಾರೆ. ರಾಮಮಂದಿರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ದ್ವೇಷ ಭಾವನೆಯ ವಿಷ ಬೀಜವನ್ನು ಬಿತ್ತುವ ಕೆಲಸ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ ಎಂದು ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳಿಯಲ್ಲಿ ಕರಸೇವಕನ ಬಂಧನ ವಿರೋಧಿಸಿ ದಕ್ಷಿಣ ಕನ್ನಡ ಬಿಜೆಪಿ ವತಿಯಿಂದ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪಿಎಫ್ ಐ ನವರನ್ನು ರಿಲೀಸ್ ಮಾಡಬೇಡಿ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಹೇಳಿದ್ದರೂ ಸಿದ್ದರಾಮಯ್ಯ ಅವರನ್ನು ರಿಲೀಸ್ ಮಾಡುತ್ತಾರೆ. ದೇಶದ್ರೋಹಿ ಹೌದೊ ಅಲ್ವೋ ಅನ್ನೋದ್ನನ ಸಿದ್ದರಾಮಯ್ಯ ತೀರ್ಮಾನ ಮಾಡಿ ಬಿಡ್ತಾರೆ. ಕಾಂಗ್ರೇಸ್ ನವರು ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆಕೋರರನ್ನು ಬಂಧಿಸುವಾಗ ಹೋರಾಟ ಮಾಡುತ್ತಾರೆ. ಮಂಗಳೂರಲ್ಲಿ ಕುಕ್ಕರ್ ಬಾಂಬ್ ಆರೋಪಿಯನ್ನು ಭಯೋತ್ಪಾದಕ ಎಂದು ಹೇಳಿದರೆ ಡಿಕೆ ಶಿವಕುಮಾರ್ ಅವನನ್ನು ಅಮಾಯಕ ಎಂದು ಹೇಳುತ್ತಾರೆ. ಎಲ್ಲವೂ ರಾಜಕೀಯ ಪ್ರೇರಿತವಾದ ಮಾತು. ಅಲ್ಪಸಂಖ್ಯಾತರ ವೋಟ್ ಸಿಗಲಿ ಎಂದು ಈ ರೀತಿ ಮಾಡುತ್ತಾರೆ. ನಾವು ಬಿಜೆಪಿಯವರು ಓಪನ್ ಚಾಲೆಂಜ್ ಮಾಡುತ್ತಿದ್ದೇವೆ. ನಿಮಗೆ ಸಾಧ್ಯವಾದರೆ ಎಲ್ಲಾ ಕರಸೇವಕರ ಕೇಸ್ ಓಪನ್ ಮಾಡಿ. ನಾವು ರಾಜಕೀಯ ಮಾತ್ರವಲ್ಲ, ಯುದ್ಧ ಮಾಡಲು ಸಿದ್ದರಿದ್ದೇವೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ ಎಂದು ಹೇಳುತ್ತಾರೆ. ಅದು ನಿಜವಾದರೂ ಅವರಲ್ಲಿ ರಾಮನ ಮನಸ್ಥಿತಿ ಇಲ್ಲ. ಹಿಂದುಗಳೆಂದರೆ ತುಚ್ಚ ಮನಸ್ಥಿತಿ ಇದೆ. ಕಾಂಗ್ರೆಸ್ ನಾಯಕರು ಈ ಹಿಂದೆ ಶ್ರೀ ರಾಮನ ಬರ್ತ್ ಸರ್ಟಿಫಿಕೇಟ್ ಇದೆಯಾ ಎಂಬ ಮಾತನ್ನು ಕೇಳಿದ್ದರು. ರಾಮಸೇತು ಕಟ್ಟಲು ಶ್ರೀರಾಮ ಇಂಜಿನಿಯರಾ? ಎಂದು ಪ್ರಶ್ನೆ ಮಾಡಿದ್ದರು. ಇನ್ನು ಮುಂದೆ ನಮ್ಮ ಮೇಲೇ ದಬ್ಬಾಳಿಕೆ ಮಾಡಿದ್ರೆ ನಿಮ್ಮನ್ನ ಎಲ್ಲಿ ಕೂರಿಸಬೇಕು ಅಲ್ಲಿ ಕೂರಿಸುತ್ತೇವೆ ಎಂದು ಆಕ್ರೋಶ ಭರಿತರಾಗಿ ಹೇಳಿದರು.

LEAVE A REPLY

Please enter your comment!
Please enter your name here