112 ನೇ ವಯಸ್ಸಿನಲ್ಲೂ 8ನೇ ಮದುವೆಯಾಗಲು ಸಿದ್ಧವಾದ ಅಜ್ಜಿ- 7 ಪತಿಯರಿಂದ ವಿಚ್ಛೇದನೆ ಪಡೆದು 8ನೇ ಮದುವೆಗೆ ಸಿದ್ಧಳಾದ ಅಜ್ಜಿ

ಮಂಗಳೂರು(ನವದೆಹಲಿ): 112 ವರ್ಷದ ಮುದುಕಿಯೊಬ್ಬಳು ತನ್ನ ಈ ಇಳಿವಯಸ್ಸಿನಲ್ಲೂ ಯಾರಾದರೂ ಪ್ರಪೋಸ್ ಮಾಡಿದರೆ ಮತ್ತೆ ಮದುವೆಯಾಗಲು ಸಿದ್ಧವಾಗಿದ್ದಾರೆನ್ನುವ ಸುದ್ದಿಯೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಸಿತಿ ಹವಾ ಅವರು ತಮ್ಮ ಏಳು ಮದುವೆಗಳಿಂದ 58 ಮತ್ತು 65 ರ ನಡುವಿನ ಐದು ಮಕ್ಕಳನ್ನು ಹೊಂದಿದ್ದಾರೆ. ಅವರ ಮಕ್ಕಳ ಮೂಲಕ, ಅವರು 19 ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ. ಪ್ರಸ್ತುತ ತನ್ನ ಕಿರಿಯ ಮಗ ಮತ್ತು ಸೊಸೆಯೊಂದಿಗೆ ವಾಸಿಸುತ್ತಿರುವ ಸಿತಿ ಹವಾ, ಯಾರಾದರೂ ತನಗೆ ಪ್ರಪೋಸ್ ಮಾಡಿದರೆ ಮರುಮದುವೆಯಾಗುವ ಸಿದ್ಧನಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ವೃದ್ದೆ ತನ್ನ ಕೊನೆಯ ಹಂತದಲ್ಲಿ ಮದುವೆಯ ಆಸೆಯನ್ನು ವ್ಯಕ್ತಪಡಿಸುವ ಮೂಲಕ ಪ್ರೀತಿಗೆ ವಯಸ್ಸಿಲ್ಲ ಎಂದು ಸಾಬೀತುಪಡಿಸಿದ್ದಾಳೆ. ಆದರೆ ಈ ವೃದ್ಧೆಯ 8ನೇ ಮದುವೆಗೆ ಒಂದು ಷರತ್ತು ಕೂಡಾ ಇದೆ ಒಬ್ಬ ಹುಡುಗ ಮುಂದೆ ಬಂದು ತನಗೆ ಪ್ರಪೋಸ್ ಮಾಡಿದಾಗ ಮಾತ್ರ ಮದುವೆಯಾಗುತ್ತೇನೆ ಎಂಬ ಷರತ್ತನ್ನೂ ಆ ವೃದ್ಧ ಹಾಕಿದ್ದಾಳೆ. ಆರೋಗ್ಯಕರ ಜೀವನ ನಡೆಸುವ ಈ ಮಹಿಳೆ ತನ್ನ 7 ಪತಿಯರಿಂದ ವಿಚ್ಛೇದನೆ ಪಡೆದು ಇದೀಗ 8 ಮದುವೆಯಾಗಲು ರೆಡಿಯಾಗಿದ್ದಾರೆ. ಬಹುತೇಕ ಒಡಹುಟ್ಟಿದವರು ಮತ್ತು ಸ್ನೇಹಿತರು ನಿಧನರಾಗಿದ್ದು ತಾನಿನ್ನೂ ಯಾರದೇ ನೆರವಿಲ್ಲದೇ ಆರೋಗ್ಯಕರ ಜೀವನ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿದ್ದಾರೆ.

 

LEAVE A REPLY

Please enter your comment!
Please enter your name here