ಚಲಿಸುವ ಸ್ಕೂಟರ್‌ ನಲ್ಲಿ ರೊಮ್ಯಾನ್ಸ್‌-ಇದೆಂತಹ ನಾನ್ ಸೆನ್ಸ್‌ ಎಂದ ಸಾರ್ವಜನಿಕರು

ಮಂಗಳೂರು: ಯುವ ಜೋಡಿಯೊಂದು ಚಲಿಸುವ ಸ್ಕೂಟರ್‌ ನಲ್ಲಿ ರೊಮ್ಯಾನ್ಸ್‌ ಮಾಡುತ್ತಾ ಸಾಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮುಂಬೈ ಬಾಂದ್ರಾ ಪೂರ್ವದ ನಿವಾಸಿ ಆರ್ಟಿಸ್ಟ್‌ ರವಿ ಬೋಹಟ್‌ ಎಂಬಾತ ತನ್ನ ತೊಡೆಯ ಮೇಲೆ ಯುವತಿಯೊಬ್ಬಳನ್ನು ಕೂರಿಸಿ ಕಂಬಳಿ ಹೊದ್ದು, ಸ್ಕೂಟರ್‌ ನಲ್ಲಿ ರೊಮ್ಯಾನ್ಸ್‌ ಮಾಡುತ್ತಾ ಸಾಗುತ್ತಿರುವ ದೃಶ್ಯ ಸಾರ್ವಜನಿಕರ ಮೊಬೈಲ್‌ ಗಳಿಗೆ ಸೆರೆಯಾಗಿದೆ. ಹೆಲ್ಮೆಟ್‌ ಧರಿಸದೆ ನಡು ರಸ್ತೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಸಾರ್ವಜನಿಕವಾಗಿ ಪ್ರಯಾಣಿಸಿದ ಇವರಿಬ್ಬರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here