ಮಂಗಳೂರು(ಕೋಲ್ಕತಾ): ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಜ.22ರಂದು ನಡೆಯಲಿದ್ದು, ಪಶ್ಚಿಮ ಬಂಗಾಳದ ಯವಕನೊಬ್ಬ 20 ಕೆ.ಜಿ ಪಾರ್ಲೆ-ಜಿ ಬಿಸ್ಕೆಟ್ ಬಳಸಿ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಪಶ್ಚಿಮ ಬಂಗಾಳದ ದುರ್ಗಾಪುರ ನಗರದ ಯುವಕ ಛೋಟಾನ್ ಘೋಷ್, ಪಾರ್ಲೆ-ಜಿ ಬಿಸ್ಕೆಟ್ಗಳಿಂದ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಿದ್ದಾನೆ. ಪ್ರತಿಕೃತಿಯ ವಿಡಿಯೋ ಭಾರಿ ವೈರಲ್ ಆಗಿದೆ. 20 ಕೆ.ಜಿ ಪಾರ್ಲೆ ಜಿ ಬಿಸ್ಕಿಟ್ಗಳನ್ನು ಬಳಸಿ, 4.4 ಅಡಿ ಎತ್ತರದ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಲಾಗಿದೆ. ಐದು ದಿನಗಳಲ್ಲಿ ಛೋಟಾನ್ ಘೋಷ್ ಮತ್ತು ಆತನ ಸ್ನೇಹಿತರು ಈ ಪ್ರತಿಕೃತಿ ರಚಿಸಿದ್ದಾರೆ.