ಕೆಲಸಗಾರರನ್ನು ಬಲವಂತಾಗಿ ಕೂಡಿ ಹಾಕಿದ ಕಾಂಪ್ಲೆಕ್ಸ್‌ ಮಾಲಕ – ಹೊಯ್ಸಳ ಪೊಲೀಸರಿಂದ ರಕ್ಷಣೆ – ಪ್ರಕರಣ ದಾಖಲು

ಮಂಗಳೂರು: ಕೆಲಸಗಾರರನ್ನು ಕಾಂಪ್ಲೆಕ್ಸ್‌ ನಲ್ಲಿ ಬಲವಂತವಾಗಿ ಕೂಡಿ ಹಾಕಿರುವ ಘಟನೆ ನಗರದ ಕಾಶಿಯಾ ಜಂಕ್ಷನ್ನ ಶಾಮಾ ಕಾಂಪ್ಲೆಕ್ಸ್ ನಲ್ಲಿ ಜ.18ರ ರಾತ್ರಿ ನಡೆದಿದೆ.

ಮಹಮ್ಮದ್ ಸವೂದ್, ನಿಶಾಮ್, ಸವಾದ್ ಮತ್ತು ಕಾಜೋಲ್‌ ಎಂಬವರು ಶಾಮಾ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿರುವ ಮಳಿಗೆಯ ಸ್ಟೋ ರ್ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ರಾತ್ರಿ 8.30ರ ವೇಳೆಗೆ ನೆಲಮಹಡಿಗೆ ಬಂದಾಗ ಕಾಂಪ್ಲೆಕ್ಸ್‌ ನ ಮಾಲೀಕ ಅಸ್ಲಾಮ್‌ ಎಂಬಾತ ನೆಲಮಹಡಿಯ ಷಟರ್ ಬಾಗಿಲು ಹಾಕಿ ಬಲವಂತವಾಗಿ ಕೂಡಿ ಹಾಕಿದ್ದಲ್ಲದೆ, ಸಂತ್ರಸ್ತರನ್ನು ತಡೆದು ಅವಾಚ್ಯ ವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಕುರಿತು ಮಹಮ್ಮದ್ ಸವೂದ್ ಎಂಬವರು ಹೊಯ್ಸ ಳ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರು. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸಂತ್ರಸ್ತರನ್ನು ರಕ್ಷಿಸಿ ಆರೋಪಿ ಅಸ್ಲಾಮ್‌ ವಿರುದ್ಧ ಐಪಿಸಿ ಸೆಕ್ಷನ್ 341, 504ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

LEAVE A REPLY

Please enter your comment!
Please enter your name here