ಚಾರ್ಮಾಡಿ ಘಾಟ್ ವಿಸ್ತರಣೆ ಕಾಮಗಾರಿಗೆ 343.73 ಕೋಟಿ ರೂ. ಬಿಡುಗಡೆ- ನಿತಿನ್ ಗಡ್ಕರಿ

ಮಂಗಳೂರು(ನವದೆಹಲಿ): ಮಂಗಳೂರು-ಮೂಡಿಗೆರೆ-ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ವಿಸ್ತರಣೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಅನುಮೋದನೆ ದೊರೆತಿದೆ.

ಚಾರ್ಮಾಡಿ ಘಾಟ್ ವಿಸ್ತರಣೆಗೆ 343.73 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಗಡ್ಕರಿ, ’ಇಪಿಸಿ ಮಾದರಿಯಲ್ಲಿ 10.8 ಕಿ.ಮೀ ರಸ್ತೆಯ ವಿಸ್ತರಣೆ ಮಾಡಲಾಗುತ್ತದೆ. ಈ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಪರಿವರ್ತಿಸಲಾಗುತ್ತದೆ. ಚಾರ್ಮಾಡಿ ಘಾಟ್ ನ ಗುಡ್ಡಗಾಡು ಪ್ರದೇಶದಲ್ಲಿ ಕೈಗೆತ್ತಿಕೊಳ್ಳುವಂತಹ ಉಪಕ್ರಮವು ಸವಾಲಿನದ್ದಾಗಿದೆ. ಇದರೊಂದಿದೆ ಸಂಚಾರ ವ್ಯವಸ್ಥೆ ಗಣನೀಯವಾಗಿ ಸುಧಾರಣೆಯಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here