



ಮಂಗಳೂರು(ಮೈಸೂರು): ಶ್ರೀರಾಮನ ವಿಗ್ರಹ ನಿರ್ಮಾಣಕ್ಕೆ ಶಿಲೆ ಸಿಕ್ಕ ಹಾರೋಹಳ್ಳಿಯ ದಲಿತ ರಾಮದಾಸ್ ಜಮೀನಿನಲ್ಲಿ ನಡೆಯುತ್ತಿರುವ ಭೂಮಿ ಪೂಜಾ ಕಾರ್ಯಕ್ಕೆ ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರನ್ನು ಪೂಜಾ ಸ್ಥಳಕ್ಕೆ ಹೋಗದಂತೆ ತಡೆದ ಘಟನೆ ನಡೆದಿದೆ.







ಪ್ರತಾಪ್ ಸಿಂಹ ದಲಿತ ವಿರೋಧಿಯಾಗಿದ್ದು, ನಮ್ಮ ಕಾರ್ಯಕ್ರಮಕ್ಕೆ ಬರೋದು ಬೇಡ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ದಲಿತ ಮುಖಂಡರು ಸಂಸದ ಪ್ರತಾಪ್ ಸಿಂಹ ಅವರನ್ನು ಪೂಜಾ ಸ್ಥಳಕ್ಕೆ ಬಾರದಂತೆ ತಡೆದಿದ್ದು, ಶಾಸಕ ಜಿ ಟಿ ದೇವೇಗೌಡ, ಪರಿಷತ್ ಸದಸ್ಯ ಸಿ ಎನ್ ಮಂಜೇಗೌಡ, ಮಾಜಿ ಶಾಸಕ ಸಾ ರಾ ಮಹೇಶ್ ಮನವೊಲಿಕೆ ಪ್ರಯತ್ನವೂ ಫಲ ನೀಡಿಲ್ಲ.
ಪಟ್ಟು ಬಿಡದ ದಲಿತ ಸಮುದಾಯ ಮುಖಂಡರು ಯಾರ ಮಾತಿಗೂ ಬಗ್ಗದೆ ಸಂಸದರನ್ನು ಪೂಜಾ ಸ್ಥಳಕ್ಕೆ ಪ್ರವೇಶಿಸಲು ಬಿಡದೆ ತಡೆಯೊಡ್ಡಿದ್ದಾರೆ. ಇದರಿಂದ ಬೇಸರಗೊಂಡ ಸಂಸದ ಪ್ರತಾಪ್ ಸಿಂಹ ಸ್ಥಳದಿಂದ ಮಾತಿಲ್ಲದೆ ನಿರ್ಗಮಿಸಿದರು.














