ಹಿಜಾಬ್ ನಿಷೇಧ ಹಿಂಪಡೆಯುವಂತೆ ಎಸ್.ವೈ.ಎಸ್ ಸಮ್ಮೇಳನದಲ್ಲಿ ಶಾಪಿ ಸಅದಿ ಸರ್ಕಾರಕ್ಕೆ ಹಕ್ಕೊತ್ತಾಯ-ಹಕ್ಕೊತ್ತಾಯ ಮಾಡಿದ್ದು ಡಿ.ಕೆ.ಶಿವಕುಮಾರ್​​ಗೆ ಅಲ್ಲ, ಸರ್ಕಾರಕ್ಕೆ- ಚುನಾವಣೆ ಹತ್ತಿರ ಬರುತ್ತಾ ಇದೆ, ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ-ಡಿಸಿಎಂ ಡಿ.ಕೆ.ಶಿವಕುಮಾರ್

ಮಂಗಳೂರು: ಮುಸ್ಲಿಂ ಮಹಿಳೆ ಮನೆಯಿಂದ ಹೊರಬರುವಾಗ ಬುರ್ಖಾ ಧರಿಸಬೇಕು. ಹಿಂದಿನ ಸರ್ಕಾರದ ಹಿಜಾಬ್ ನಿಷೇಧವನ್ನು ಹಿಂಪಡೆಯುವಂತೆ ಶಾಪಿ ಸಅದಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಮಂಗಳೂರಿನ ಹೊರವಲಯದ ಅಡ್ಯಾರಿನಲ್ಲಿ ಸುನ್ನಿ ಯುವಜನ ಸಂಘ ಆಯೋಜನೆ ಮಾಡಿರುವ ಎಸ್​ವೈಎಸ್​ ಮಹಾ ಸಮ್ಮೇಳನದಲ್ಲಿ ಈ ಹಕ್ಕೊತ್ತಾಯ‌ ಮಾಡಲಾಗಿದೆ. 2ಬಿ 4% ಮೀಸಲಾತಿಯಲ್ಲಿ ವಾಪಾಸ್ ಪಡೆದಿದ್ದನ್ನು ಮರಳಿಸುವಂತೆ ಮತ್ತು 2013ರ ಜಾತಿಗಣತಿ ವರದಿ ಬಿಡುಗಡೆ ಮಾಡುವಂತೆ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಲಾಯಿತು. ಮಂಗಳೂರು ಸಿಎಎ ಎನ್​ಆರ್​ಸಿ ಗೋಲಿಬಾರ್​ನಲ್ಲಿ ಮೃತಪಟ್ಟ ಕುಟುಂಬಕ್ಕೆ ಸರಕಾರದಿಂದ ಪರಿಹಾರ, ಯುವಕರ ಮೇಲಿರುವ ಕೇಸ್ ವಾಪಾಸ್ ಪಡೆಯುವಂತೆ ಆಗ್ರಹಿಸಲಾಗಿದೆ. ಹುಬ್ಬಳ್ಳಿ, ಡಿ‌.ಜೆ.ಹಳ್ಳಿ-ಕೆಜೆ ಹಳ್ಳಿ ಗಲಭೆಯಲ್ಲಿ ಜೈಲಿನಲ್ಲಿರುವ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡುವಂತೆ ಮತ್ತು ಚಿಕ್ಕಮಗಳೂರು ಬಾಬಾಬುಡನ್ ಗಿರಿ ದರ್ಗಾಕ್ಕೆ ಕಳೆದ ಸರ್ಕಾರ ತಂದ ಸಮಿತಿ ವಿಚಾರವಾಗಿ ಆದ ಅನ್ಯಾಯವನ್ನು ಸರಿಪಡಿಸುವಂತೆ ಶಾಪಿ ಸಅದಿ ಒತ್ತಾಯಿಸಿದರು.

ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮುಸ್ಲಿಮರು ನನ್ನ ಸಹೋದರರು ಎಂದಿದ್ದಕ್ಕೆ ಟೀಕೆ, ವಿವಾದ ಮಾಡಿದರು. ಆದರೆ ಇದಕ್ಕೆಲ್ಲಾ ಹೆದರುವುದಿಲ್ಲ. ನಾನು ಕನಕಪುರದ ಬಂಡೆ. ನೀವು ಹಕ್ಕೊತ್ತಾಯ ಮಾಡಿದ್ದು ಡಿ.ಕೆ.ಶಿವಕುಮಾರ್​​ಗೆ ಅಲ್ಲ, ಸರ್ಕಾರಕ್ಕೆ. ನಿಮ್ಮ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇರುತ್ತೆ. ನಾವು ನಿಮ್ಮ ಜೊತೆ ಇದ್ದು, ನಿಮ್ಮ ರಕ್ಷಣೆಗೆ ನಿಲ್ಲುತ್ತೇವೆ. ಚುನಾವಣೆ ಹತ್ತಿರ ಬರುತ್ತಾ ಇದೆ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here